ವಿಶ್ವ ಫಿಸಿಯೋಥೆರಪಿ ದಿನಾಚರಣೆ

Ull_Nitte
Published on

ಉಳ್ಳಾಲ: ನಿಟ್ಟೆ ವಿಶ್ವವಿದ್ಯಾಲಯದ ಅಂಗಸಂಸ್ಥೆ ನಿಟ್ಟೆ ಫಿಸಿಯೋಥೆರಪಿ ಇನ್‌ಸ್ಟಿಟ್ಯೂಟ್ ವತಿಯಿಂದ ವಿಶ್ವ ಫಿಸಿಯೋಥೆರಪಿ ದಿನದ ಪ್ರಯುಕ್ತ ಮಂಗಳೂರು ರಾಮಕೃಷ್ಣ ಆಶ್ರಮದಲ್ಲಿ ಎರಡು ದಿನ ವಿಶೇಷ ಫಿಸಿಯೋಥೆರಪಿ ಶಿಬಿರ ನಡೆಯಿತು.

ಇನ್‌ಸ್ಟಿಟ್ಯೂಟ್ ಸೋಶಿಯಲ್ ರೆಸ್ಪಾನ್ಸಿಬಿಲಿಟಿ ಉಪಾಧ್ಯಕ್ಷ ಪ್ರೊ.ಸತೀಶ್ ಕುಮಾರ್ ಭಂಡಾರಿ ಉದ್ಘಾಟಿಸಿದರು. ರಾಮಕೃಷ್ಣ ಆಶ್ರಮ ಅಧ್ಯಕ್ಷ ಜಿತಕಾನಂದ ಮಹಾರಾಜ್ ಜಿ., ಡಾ.ಪುರುಷೋತ್ತಮ್ ಚಿಪ್ಪಲಾ, ಡಾ.ನಿತ್ಯಲ್ ಕುಮಾರ್, ಡಾ.ಸಮತಾ ಶೆಟ್ಟಿ, ಡಾ.ಕೃಷ್ಣಪ್ರಸಾದ್, ಬ್ರಹ್ಮಚಾರಿ ಮಿಸ್ಟರ್ ರಂಜನ್ ಬೆಲ್ಲಾರ್ಪಾಡಿ, ಕ್ಯಾಪ್ಟನ್ ಗೋಪಿನಾಥ್ ಬೆಲ್ಲ ಉಪಸ್ಥಿತರಿದ್ದರು.

ನಿಟ್ಟೆ ಫಿಸಿಯೋಥೆರಪಿ ಇನ್‌ಸ್ಟಿಟ್ಯೂಟ್ ಪ್ರಾಂಶುಪಾಲ ಡಾ.ಧನೇಷ್ ಕುಮಾರ್ ಸ್ವಾಗತಿಸಿದರು. ಪ್ರೊ.ರಾಕೇಶ್ ಕೃಷ್ಣ ನಿರ್ವಹಿಸಿದರು. ಡಾ.ಸೌಮ್ಯಾ ಶ್ರೀವಾಸ್ತವ್ ಮುಂದಾಳತ್ವದಲ್ಲಿ ನಡೆದ ಶಿಬಿರದಲ್ಲಿ 149 ಸ್ನಾತಕೋತ್ತರ ವಿದ್ಯಾರ್ಥಿಗಳು ಮತ್ತು ಅಧ್ಯಾಪಕರು ರೋಗಿಗಳಿಗೆ ಚಿಕಿತ್ಸೆ ನೀಡಿದರು. ಈ ರೋಗಿಗಳಿಗೆ ಮುಂದಿನ ಚಿಕಿತ್ಸೆ ಕೆ.ಎಸ್.ಹೆಗ್ಡೆ ಆಸ್ಪತ್ರೆಯಲ್ಲಿ ನೀಡಲಾಗುತ್ತದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net