ವಿಶ್ವದ ಆರ್ಥಿಕ ಸಾಮಾಜಿಕ ಪ್ರಗತಿಗೆ ಶಾಂತಿ ಪಾತ್ರ ಮುಖ್ಯ: ಪ್ರೊ.ಗುರುಬಸಪ್ಪ ಪ್ರತಿಪಾದನೆ

ಹೈದರಾಬಾದ ಕರ್ನಾಟಕ ಶಿಕ್ಷಣ ಸಂಸ್ಥೆಯ ನಗರದ  ಶ್ರೀಮತಿ ವೀರಮ್ಮ ಗಂಗಸಿರಿ ಮಹಿಳಾ ಮಹಾವಿದ್ಯಾಲಯದಲ್ಲಿ ಜರುಗಿದ   ವಿಶ್ವಶಾಂತಿ ದಿನಾಚರಣೆ ಉದ್ಘಾಟಿಸಿ ಮಾತನಾಡಿ, ವಿಶ್ವದ ಆರ್ಥಿಕತೆ ಜಗತ್ತಿನ ಶಾಂತಿ ವ್ಯವಸ್ಥೆಯ ಮೇಲೆ ನಿರ್ಭರವಾಗಿದೆ. ಸಮಾಜದ ಪ್ರಗತಿಗೆ ಶಾಂತಿ ಬಹು ಮುಖ್ಯ ಪಾತ್ರವಹಿಸುತ್ತದೆ. ಮನುಷ್ಯನ ಎಲ್ಲ ಬೆಳವಣಿಗೆ ಶಾಂತಿ ಮಾರ್ಗದಿಂದ ಮಾತ್ರ ಸಾಧ್ಯ ಎಂದರು. ಈ ಮೊದಲಿಗಿಂತಲೂ ಈಗಿನ  ಸಂದರ್ಭದಲ್ಲಿ ಜಗತ್ತಿನ ಶಾಂತಿ ವ್ಯವಸ್ಥೆ ಕಾಪಾಡುವುದು ಬಹಳ ಮುಖ್ಯವಾಗಿದೆ ಎಂದು ಬಲವಾಗಿ ಪ್ರತಿಪಾದಿಸಿದರು.
IMG-20230926-WA0013
Published on

ವಿಜಿ ಮಹಿಳಾ ಕಾಲೇಜಿನಲ್ಲಿ ವಿಶ್ವ ಶಾಂತಿ ದಿನಾಚರಣೆ | ಲೇಖನ ಸ್ಪರ್ಧೆಯಲ್ಲಿ ವಿಜೇತ ವಿದ್ಯಾರ್ಥಿಗಳಿಗೆ ಬಹುಮಾನ ವಿತರಣೆ

ವಿಜಯವಾಣಿ ಸುದ್ದಿಜಾಲ ಕಲಬುರಗಿ

ವಿಶ್ವದ ಎಲ್ಲಡೆ ಶಾಂತಿ ನೆಲೆಸಿದರೆ ಮಾತ್ರ ಸಾಮಾಜಿಕ, ಭೌತಿಕ ಮತ್ತು ಆರ್ಥಿಕ ಬೆಳವಣಿಗೆ ಸಾಧ್ಯವಾಗುತ್ತದೆ ಎಂದು ನಿವೃತ್ತ ಪ್ರಾಧ್ಯಾಪಕರಾದ ಟಿ.ಗುರುಬಸಪ್ಪ  ಹೇಳಿದರು.
ಹೈದರಾಬಾದ ಕರ್ನಾಟಕ ಶಿಕ್ಷಣ ಸಂಸ್ಥೆಯ ನಗರದ  ಶ್ರೀಮತಿ ವೀರಮ್ಮ ಗಂಗಸಿರಿ ಮಹಿಳಾ ಮಹಾವಿದ್ಯಾಲಯದಲ್ಲಿ ಜರುಗಿದ   ವಿಶ್ವಶಾಂತಿ ದಿನಾಚರಣೆ ಉದ್ಘಾಟಿಸಿ ಮಾತನಾಡಿ, ವಿಶ್ವದ ಆರ್ಥಿಕತೆ ಜಗತ್ತಿನ ಶಾಂತಿ ವ್ಯವಸ್ಥೆಯ ಮೇಲೆ ನಿರ್ಭರವಾಗಿದೆ. ಸಮಾಜದ ಪ್ರಗತಿಗೆ ಶಾಂತಿ ಬಹು ಮುಖ್ಯ ಪಾತ್ರವಹಿಸುತ್ತದೆ. ಮನುಷ್ಯನ ಎಲ್ಲ ಬೆಳವಣಿಗೆ ಶಾಂತಿ ಮಾರ್ಗದಿಂದ ಮಾತ್ರ ಸಾಧ್ಯ ಎಂದರು.
ಈ ಮೊದಲಿಗಿಂತಲೂ ಈಗಿನ  ಸಂದರ್ಭದಲ್ಲಿ ಜಗತ್ತಿನ ಶಾಂತಿ ವ್ಯವಸ್ಥೆ ಕಾಪಾಡುವುದು ಬಹಳ ಮುಖ್ಯವಾಗಿದೆ ಎಂದು ಬಲವಾಗಿ ಪ್ರತಿಪಾದಿಸಿದರು. ಮೊದಲ ಹಾಗೂ ದ್ವಿತೀಯ ವಿಶ್ವ ಯುದ್ಧ  ನಮಗೆ ಶಾಂತಿಯ ಪ್ರಾಮುಖ್ಯತೆ ತಿಳಿಸಿ ಕೊಟ್ಟಿದೆ. ರಷ್ಯಾ ಮತ್ತು ಉಕ್ರೆನ್  ನಡುವೆ ಯುದ್ಧ ನಡೆದಿದೆ. ಈ ಯುದ್ಧದ ಪರಿಣಾಮ  ಸಾವಿರಾರು ಜನರು ಮತ್ತು ಮಕ್ಕಳು ಬಲಿಯಾಗುತ್ತಿರುವುದು ಮಾನವ  ಕುಲಕ್ಕೆ ಕಪ್ಪು ಚುಕ್ಕೆಯಾಗಿದೆ. ಈ ಯುದ್ಧದಿಂದಾಗಿ ಎರಡು ದೇಶಗಳ ಮತ್ತು ಜಗತ್ತಿನ ಆರ್ಥಿಕ ವ್ಯವಸ್ಥೆ ಹಾಳಾಗಿರುವುದು ಕಂಡುಬರುತ್ತವೆ. ಹೀಗಿದ್ದರೂ ಮನುಷ್ಯ ಶಾಂತಿಯ ಮಹತ್ವ ಇನ್ನೂ ಅರಿತಿಲ್ಲವೆಂದು ಅನಿಸುತ್ತಿದೆ ಗುರುಬಸಪ್ಪ ಕಳವಳ ವ್ಯಕ್ತಪಡಿಸಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಪ್ರಾಂಶುಪಾಲರಾದ ಡಾ. ಆರ್.ಬಿ. ಕೊಂಡ ಮಾತನಾಡಿ, ಸಮಾಜದ ಏಳಿಗೆಗಾಗಿ ಶಾಂತಿ ಮುಖ್ಯವಾಗಿದೆ. ವಿದ್ಯಾರ್ಥಿಗಳು ಸಾರ್ವಜನಿಕರಿಗೆ ಶಾಂತಿಯ ಸಂದೇಶ ತಿಳಿಸಬೇಕು ಎಂದರು.
ಇಂಗ್ಲಿಷ್ ವಿಭಾಗದ ಮುಖ್ಯಸ್ಥರಾದ ಡಾ.ಸವಿತಾ.ಬಿ.ಬೋಳಶೆಟ್ಟಿ, ಉಪ ಪ್ರಾಂಶುಪಾಲರಾದ ಉಮಾ ರೇವೂರ, ಪ್ರಾಧ್ಯಾಪಕರಾದ ಡಾ.ನಾಗೇಂದ್ರ ಮಸೂತಿ, ಡಾ.ರಾಜೇಶ ಸಿದ್ದಣ್ಣ, ಡಾ.ವಿಶ್ವನಾಥ ದೇವರುಮನಿ, ಡಾ.ಮಹೇಶ ಗಂವ್ಹಾರ, ಡಾ.ಪ್ರೇಮಚಂದ ಚವ್ಹಾಣ,ಡಾ.ಚಂದ್ರಕಲಾ ಪಾಟೀಲï, ಶಿವಲೀಲಾ ಧೋತ್ರೆ ಸೇರಿದಂತೆ ವಿವಿಧ ವಿಭಾಗದ ಮುಖ್ಯಸ್ಥರಿದ್ದರು.
ಉಪನ್ಯಾಸಕಿ ಅಶ್ವಿನಿ ಮಠ ಸ್ವಾಗತಿಸಿದರು. ಸಹಾಯಕ ಪ್ರಾಧ್ಯಾಪಕ ಡಾ.ಜ್ಯೋತಿಪ್ರಕಾಶ ದೇಶಮುಖ ಪ್ರಾಸ್ತಾವಿಕವಾಗಿ ಮಾತನಾಡಿ, ಮುಖ್ಯ ಅತಿಥಿಗಳ ಪರಿಚಯಿಸಿದರು.ವಿಶ್ವ ಶಾಂತಿ ದಿನಾಚರಣೆಯ ಅಂಗವಾಗಿ ಹಮ್ಮಿಕೊಂಡಿದ್ದ ವಿವಿಧ ಲೇಖನ ಸ್ಪರ್ಧೆಯಲ್ಲಿ ವಿಜೇತ ವಿದ್ಯಾರ್ಥಿಗಳಿಗೆ ಬಹುಮಾನ ವಿತರಿಸಲಾಯಿತು.
ಕೋಮಲï ಚೌದ್ರಿ ಕಾರ್ಯಕ್ರಮ ನಿರೂಪಿಸಿದರು, ಸಾಕ್ಷಿ ಪ್ರಾರ್ಥನೆ ಗೀತೆ ಹಾಡಿದರು. ಉಪನ್ಯಾಸಕಿ ಸುಮನ್ ಯಾಳವಾರ ವಂದಿಸಿದರು. ಬೋಧಕ, ಬೋಧಕೇತರ ಸಿಬ್ಬಂದಿ ಮತ್ತು ವಿದ್ಯಾರ್ಥಿಗಳು ಉಪಸ್ಥಿತರಿದ್ದರು.
---
ಶಾಂತಿಯ ಸಮಾಜ ನಿರ್ಮಿಸುವುದು ಎಲ್ಲರ ಹೊಣೆಯಾಗಿದೆ. ಪ್ರತಿಯೊಬ್ಬರು ಸ್ವಯಂ ಪ್ರೇರಿತರಾಗಿ ಮತ್ತು ವೈಯಕ್ತಿಕವಾಗಿ ಶಾಂತಿ ಸಾರರಬೇಕು. ಆಗ ಮಾತ್ರ ಜಗತ್ತಿನಾದ್ಯಂತ ಶಾಂತಿ ಹರಡುತ್ತದೆ.ಜತ್ತಿನ ಕೆಲವೊಂದು ತಲ್ಲಣಗಳನ್ನು ಸೂಕ್ಷö್ಮವಾಗಿ ಗಮನಿಸಿದಾಗ ಇಂತಹ ಪರಿಸ್ಥಿತಿಯಲ್ಲಿ ವಿದ್ಯಾರ್ಥಿಗಳು ಶಾಂತಿದೂತರಾಗಿ ನಿಲ್ಲುವ ಮೂಲಕ ಶಾಂತಿಯ ನವ ಸಮಾಜ ನಿರ್ಮಿಸಲು ಮುಂದಾಗಬೇಕು.
| ಡಾ.ಸವಿತಾ ಬೋಳಶೆಟ್ಟಿ  ಆಂಗ್ಲ ವಿಭಾಗದ ಮುಖ್ಯಸ್ಥರು ವಿಜಿ ಮಹಿಳಾ ಮಹಾವಿದ್ಯಾಲಯ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net