ಶಾಲೆ, ವಿದ್ಯಾರ್ಥಿಗಳ ಶ್ರೇಯೋಭಿವೃದ್ಧಿಗೆ ಶ್ರಮ : ಸನ್ಮಾನ ಸಮಾರಂಭದಲ್ಲಿ ವೆಂಕಟೇಶ ಹೆಬ್ಬಾರ್ ಶ್ಲಾಘನೆ

New Project (43)
Published on

ಮೂಲ್ಕಿ: ಶಿಕ್ಷಣ ಇಲಾಖೆಯಲ್ಲಿ ಮೂರು ದಶಕಗಳಿಗೂ ಹೆಚ್ಚು ಕಾಲ ಸೇವೆಗೈದು ಮುಖ್ಯಶಿಕ್ಷಕರಾಗಿ ಸರ್ಕಾರಿ ಶಾಲೆ ಮಕ್ಕಳಿಗೆ ಉತ್ತಮ ಶಿಕ್ಷಣ ನೀಡಿ ಶಾಲೆ ಹಾಗೂ ವಿದ್ಯಾರ್ಥಿಗಳ ಶ್ರೇಯೋಭಿವೃದ್ಧಿಗೆ ಶ್ರಮಿಸಿದ ಕೀರ್ತಿ ಪಡೆದ ಶಿಮಂತೂರು ವಿಷ್ಣುಮೂರ್ತಿ ಭಟ್ ಅಭಿನಂದನಾರ್ಹರು ಎಂದು ಲಯನ್ಸ್ ಕ್ಲಬ್ ಬಪ್ಪನಾಡು ಇನ್‌ಸ್ಪೈರ್ ಸ್ಥಾಪಕ ಅಧ್ಯಕ್ಷ ವೆಂಕಟೇಶ ಹೆಬ್ಬಾರ್ ಹೇಳಿದರು.

ವಿಶ್ವ ಜಾಗತಿಕ ಹಿರಿಯರ ದಿನಾಚರಣೆ ಪ್ರಯುಕ್ತ ವಿಶ್ರಾಂತ ಮುಖ್ಯಶಿಕ್ಷಕ ಶಿಮಂತೂರಿನ ವಿಷ್ಣುಮೂರ್ತಿ ಭಟ್ ಅವರನ್ನು ಅವರ ಸ್ವಗೃಹದಲ್ಲಿ ಗೌರವಿಸಿ ಮಾತನಾಡಿದರು.

ಶಿಕ್ಷಕಿ ಕಾಮೇಶ್ವರಿ ಭಟ್, ಲಯನ್ಸ್ ಕ್ಲಬ್ ಬಪ್ಪನಾಡು ಇನ್‌ಸ್ಪೈರ್ ಅಧ್ಯಕ್ಷ ಅನಿಲ್ ಕುಮಾರ್, ಮಾಜಿ ವಲಯಾಧ್ಯಕ್ಷೆ ಪ್ರತಿಭಾ ಹೆಬ್ಬಾರ್, ಬಿ.ಶಿವಪ್ರಸಾದ್, ಪ್ರಣವ್ ಶರ್ಮ, ಭಾಸ್ಕರ್ ಕಾಂಚನ್, ಸುದರ್ಶನ್ ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net