ಪ್ರಾಣಿ ಸಂಕುಲ ರಕ್ಷಣೆಗೆ ಕಾಳಜಿ: ರವಿರಾಜ್ ರೈ ಅಭಿಪ್ರಾಯ

gida
ಸಜಂಕಾಡಿ ಶಾಲೆಯಲ್ಲಿ ರವಿರಾಜ್ ರೈ ಸಜಂಕಾಡಿ ಗಿಡ ವಿತರಿಸಿದರು. ಬಡಗನ್ನೂರು ಗ್ರಾಪಂ ಸದಸ್ಯ ಕುಮಾರ್ ಕೆ.ಅಂಬಟೆಮೂಲೆ, ಶಾಲಾಭಿವೃದ್ಧಿ ಸಮಿತಿಯ ಅಧ್ಯಕ್ಷೆ ಯಶೋದಾ ಮತ್ತಿತರರು ಇದ್ದರು.
Published on

ವಿಜಯವಾಣಿ ಸುದ್ದಿಜಾಲ, ಪುತ್ತೂರು ಗ್ರಾಮಾಂತರ

ಇಂದಿನ ಕಾಲಘಟ್ಟದಲ್ಲಿ ಪರಿಸರ ಸಂರಕ್ಷಣೆಯ ಕಾರ್ಯ ಅತ್ಯಂತ ಅನಿವಾರ್ಯ. ಪರಿಸರ ಉಳಿದರೆ ಮಾತ್ರ ಮನುಷ್ಯ ಮಾತ್ರವಲ್ಲದೆ ಪ್ರಾಣಿ ಸಂಕುಲಗಳು-ಜೀವ ರಾಶಿಗಳು ಉಳಿಯಲು ಸಾಧ್ಯ ಎಂದು ಬಡಗನ್ನೂರು ಗ್ರಾಪಂ ಸದಸ್ಯ ರವಿರಾಜ್ ರೈ ಸಜಂಕಾಡಿ ಅಭಿಪ್ರಾಯಪಟ್ಟರು.

ಸಜಂಕಾಡಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ‘ಮನೆಗೊಂದು ಗಿಡ’ ಕಾರ್ಯಕ್ರಮಕ್ಕೆ ಚಾಲನೆ ನೀಡಿ, ವಿದ್ಯಾರ್ಥಿಗಳಿಗೆ ಗಿಡ ವಿತರಿಸಿ ಮಾತನಾಡಿದರು.

ಶಾಲಾಭಿವೃದ್ದಿ ಸಮಿತಿ ಅಧ್ಯಕ್ಷೆ ಯಶೋದಾ ಗಿಡ ನೆಡುವ ಕಾರ್ಯಕ್ಕೆ ಚಾಲನೆ ನೀಡಿದರು. ಬಡಗನ್ನೂರು ಗ್ರಾಪಂ ಸದಸ್ಯ ಕುಮಾರ್ ಕೆ ಅಂಬಟೆಮೂಲೆ, ಕೃಷಿಕ ಕಾಂತಪ್ಪ ಪೂಜಾರಿ ಮಡತ್ತರಮೂಲೆ ಮಾತನಾಡಿದರು.

ಮಂಗಳೂರಿನ ರಾಷ್ಟ್ರೀಯ ಪರಿಸರ ಸಂರಕ್ಷಣಾ ಒಕ್ಕೂಟದ ಪುತ್ತೂರು ಘಟಕ ಮತ್ತು ಪುತ್ತೂರು ವಲಯ ಅರಣ್ಯ ಇಲಾಖೆಯ ಸಹಕಾರದಲ್ಲಿ ಮಕ್ಕಳಿಗೆ ಗಿಡ ವಿತರಿಸಲಾಯಿತು. ಮುಖ್ಯಶಿಕ್ಷಕಿ ಸುಮಲತಾ ಪಿ.ಕೆ ಕಾರ್ಯಕ್ರಮ ನಿರೂಪಿಸಿದರು. ಶಿಕ್ಷಕ ಗಣೇಶ ನಾಯಕ್ ವಂದಿಸಿದರು. ಶಿಕ್ಷಕಿ ಶಶಿಕಲಾ, ಶಾಲಾಭಿವೃದ್ಧಿ ಸಮಿತಿ ಸದಸ್ಯರು ಹಾಗೂ ಪಾಲಕರು ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net