ಗಣಪತಿ ಪ್ರೌಢಶಾಲೆಯಲ್ಲಿ ವಿಶ್ವ ಪರಿಸರ ದಿನ

pdb
Published on

ಪಡುಬಿದ್ರಿ: ವಿಶ್ವ ಪರಿಸರ ದಿನಾಚರಣೆ ಅಂಗವಾಗಿ ಪಡುಬಿದ್ರಿ ಗಣಪತಿ ಪ್ರೌಢಶಾಲೆಯ ಶರಣ್ಯ ಪರಿಸರ ಸಂದಿಂದ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಉಡುಪಿ ಜಿಲ್ಲಾ ಕೃಷಿಕ ಸಂ ಅಧ್ಯಕ್ಷ ಬಂಟಕಲ್ಲು ರಾಮಕೃಷ್ಣ ಶರ್ಮ ಸಸ್ಯ ಸಂಪತ್ತಿನ ವರ್ಧನೆ ಮತ್ತು ಸಂರಕ್ಷಣೆಯ ವಿಧಾನದ ಕುರಿತು ವಿಶೇಷ ಉಪನ್ಯಾಸ ನೀಡಿದರು. ಶಾಲೆ ಸಮೀಪ ಗಿಡಗಳನ್ನು ನೆಡಲಾಯಿತು.

ಪಡುಬಿದ್ರಿ ಸಿಎ ಬ್ಯಾಂಕ್ ಅಧ್ಯಕ್ಷ ವೈ.ಸುಧೀರ್ ಕುವಾರ್, ಸದಾಶಿವ ಆಚಾರ್ಯ, ಪಡುಬಿದ್ರಿ ಗ್ರಾಮ ಪಂಚಾಯಿತಿ ಸದಸ್ಯ ಗಣೇಶ ಕೋಟ್ಯಾನ್, ನಾರಾಯಣ ರಾವ್ ದಂಪತಿ, ಹಳೇ ವಿದ್ಯಾರ್ಥಿ ಸಂದ ರವಾಕಾಂತ ರಾವ್, ಗಣೇಶ ರಾವ್, ರಾಜೇಶ ಶೇರಿಗಾರ್, ಶಶಿಕಾಂತ, ಕೇಶವ ರಾವ್, ಸತೀಶ ಆಚಾರ್ಯ ಮತ್ತಿತರರು ಪಾಲ್ಗೊಂಡಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net