ಸಂಶೋಧನೆ, ಅಭ್ಯಾಸಗಳ ವಿಶ್ವ ಸಮ್ಮೇಳನ

Published on

ಶಿರ್ವ: ಶ್ರೀ ಮಧ್ವ ವಾದಿರಾಜ ತಾಂತ್ರಿಕ ಮಹಾವಿದ್ಯಾಲಯವು ಕಾನ್ಫ್‌ವರ್ಲ್ಡ್ ಶೈಕ್ಷಣಿಕ ಸಂಶೋಧನೆ ಮತ್ತು ಅಭಿವೃದ್ಧಿ ಸಂ ಹಾಗೂ ಫಿಲಿಪೈನ್ಸ್‌ನ ನುವಾ ಎಸಿಜಾ ವಿಜ್ಞಾನ ಮತ್ತು ತಂತ್ರಜ್ಞಾನ ವಿಶ್ವವಿದ್ಯಾಲಯ ಸಹಯೋಗದೊಂದಿಗೆ ಸಂಶೋಧನೆ ಮತ್ತು ಅಭ್ಯಾಸಗಳ ಕುರಿತಾದ ವಿಶ್ವ ಸಮ್ಮೇಳನ ಗುರುವಾರ ಹಾಗೂ ಶುಕ್ರವಾರ ನಡೆಯಿತು.

ಈ ಜಾಗತಿಕ ಮಟ್ಟದ ಶೈಕ್ಷಣಿಕ ಕಾರ್ಯಕ್ರಮ, ಅಂತಾರಾಷ್ಟ್ರೀಯ ಮಟ್ಟದಲ್ಲಿ ಶೈಕ್ಷಣಿಕ ಪಾಲುದಾರಿಕೆ ಮತ್ತು ನೆರೆ ದೇಶಗಳೊಂದಿಗಿನ ಜ್ಞಾನ ವಿನಿಮಯ ಈ ಸಮ್ಮೇಳನದ ಮುಖ್ಯ ಉದ್ದೇಶವಾಗಿದೆ.

ಇಂಜಿನಿಯರಿಂಗ್, ತಾಂತ್ರಿಕ ನಿರ್ವಹಣೆ, ಸಾವಾಜಿಕ ವಿಜ್ಞಾನ, ಶಿಕ್ಷಣ ಮತ್ತು ಆರೋಗ್ಯ ವಿಜ್ಞಾನಗಳು ಸೇರಿದಂತೆ ವ್ಯಾಪಕ ಶ್ರೇಣೀಯ ಮುಖ್ಯಾಂಶಗಳನ್ನು ಒಳಗೊಂಡಿದೆ. ಈ ಸಮ್ಮೇಳನದಲ್ಲಿ ಜಾಗತಿಕವಾಗಿ ಗುರುತಿಸಲ್ಪಟ್ಟ ಸಂಶೋಧಕರು ಮತ್ತು ಉದ್ಯಮದಾತರನ್ನು ಒಳಗೊಂಡ ಉಪನ್ಯಾಕರು ಭಾಗವಹಿಸಿದ್ದರು.

ಸಮ್ಮೇಳನದಲ್ಲಿ ಭಾರತ, ಫಿಲಿಫೈನ್ಸ್, ಮಲೇಷ್ಯಾ, ನೈಜೀರಿಯಾ ಮತ್ತು ಇತರ ರಾಷ್ಟ್ರಗಳ ವಿದ್ವಾಂಸರು ಮತ್ತು ವೃತ್ತಿಪರರು ಭಾಗವಹಿಸಿದ್ದರು. ಸಂಸ್ಥೆ ಶೈಕ್ಷಣಿಕ ಡೀನ್ ಡಾ.ನಾಗರಾಜ್ ಭಟ್ ಸಮ್ಮೇಳನದ ಅಧ್ಯಕ್ಷತೆ ವಹಿಸಿದ್ದರು.

ಆಂತರಿಕ ಗುಣಮಟ್ಟದ ಟಕ ಡೀನ್ ಡಾ.ಸುದರ್ಶನ್ ರಾವ್ ಸಮ್ಮೇಳನದ ವಿಶೇಷ ಉಪನ್ಯಾಸಕರಾಗಿ ಭಾಗವಹಿಸಿದ್ದರು. ಪ್ರಾಧ್ಯಾಪಕ ಪ್ರಾದ್ಯಾಪಕ ಡಾ.ರವೀಂದ್ರ ಎಚ್.ಜೆ., ಸೌಮ್ಯ ಭಟ್ ಮತ್ತು ಗಣೇಶ್ ಎಸ್.ಶೆಟ್ಟಿ ಅವರಿಗೆ ಅತ್ಯುತ್ತಮ ಪ್ರಬಂಧ ಮಂಡನೆ ಪ್ರಶಸ್ತಿ ನೀಡಲಾಯಿತು. ಸ್ವಾತಿ ಅತ್ಯುತ್ತಮ ಪ್ರಸ್ತುತಿ ಪ್ರಶಸ್ತಿ ಮತ್ತು ಅಜೇಶ್ ಅತ್ಯುತ್ತಮ ನವೀನ ಯೋಜನೆ ಪ್ರಶಸ್ತಿ ಪಡೆದುಕೊಂಡರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net