ಕುಂದಾಪುರದಲ್ಲಿ ಗ್ರಾಮೀಣ ಕ್ರೀಡಾಕೂಟ ಲಗೋರಿ

gan (15)
Published on

ಕುಂದಾಪುರ: ವಿಶ್ವ ಕುಂದಾಪ್ರ ಕನ್ನಡ ದಿನಾಚರಣೆ ಅಂಗವಾಗಿ ಕಲಾಕ್ಷೇತ್ರ ಕುಂದಾಪುರ ಟ್ರಸ್ಟ್ ವತಿಯಿಂದ ಜುಲೈ 20ರಂದು ಕುಂದಾಪುರ ಬೋರ್ಡ್ ಹೈಸ್ಕೂಲ್ ಮೈದಾಲನದಲ್ಲಿ ಲಗೋರಿ ಗ್ರಾಮೀಣ ಕ್ರೀಡಾಕೂಟ ನಡೆಯಲಿದೆ. ಕ್ರೀಡಾಕೂಟದ ಪೂರ್ವತಯಾರಿ ಸಭೆ ಕಲಾಕ್ಷೇತ್ರ ಕಚೇರಿಯ ಪ್ರಕಾಶಾಂಗಣದಲ್ಲಿ ಶುಕ್ರವಾರ ನಡೆಯಿತು.

ಕಲಾಕ್ಷೇತ್ರ ಕುಂದಾಪುರ ಟ್ರಸ್ಟ್ ಅಧ್ಯಕ್ಷ ಕಿಶೋರ್ ಕುವಾರ್ ಮಾತಾನಾಡಿ, ಕಳೆದ ವರ್ಷ ಆಯೋಜಿಸಿದ್ದ ಲಗೋರಿ ಆಟ ಯಶಸ್ಸು ಕಂಡ ಹಿನ್ನೆಲೆ ಈ ಬಾರಿ ಮತ್ತೊಮ್ಮೆ ಆಯೋಜಿಸಲಾಗುತ್ತಿದೆ ಎಂದರು.

ದೈಹಿಕ ಶಿಕ್ಷಣ ಶಿಕ್ಷಕರಾದ ಅರುಣ್ ಶೆಟ್ಟಿ, ಚಂದ್ರಶೇಖರ ಬೀಜಾಡಿ, ಮುಖಂಡ ವಿಕಾಸ್ ಹೆಗ್ಡೆ, ಸಾಹಿತ್ಯ ಪರಿಷತ್‌ನ ಸುಬ್ರಹ್ಮಣ್ಯ ಶೆಟ್ಟಿ, ಲಯನ್ಸ್ ಪ್ರಮುಖರಾದ ರಾಜೀವ ಕೋಟ್ಯಾನ್, ರವಾನಂದ ಗಾಣಿಗ ಮತ್ತು ಕ್ರೀಡಾಪಟು ಪ್ರದೀಪ್‌ಚಂದ್ರ ಶೆಟ್ಟಿ ಅಭಿಪ್ರಾಯ ಹಂಚಿಕೊಂಡರು.

ಕಲಾಕ್ಷೇತ್ರ ಸಂಸ್ಥೆ ಸದಸ್ಯರು, ವಿವಿಧ ಸಂ ಸಂಸ್ಥೆಗಳ ಪ್ರಮುಖರು, ಕ್ರೀಡಾಪಟುಗಳು ಸಭೆಯಲ್ಲಿ ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net