ಅಂಗವಿಕಲರ ಆರೈಕೆದಾರರಿಗೆ ಪ್ರೋತ್ಸಾಹ ಅಗತ್ಯ

Sudhee_29_World_Care_Takers_Day_@_Bala_Bhavan (1)
Published on

ಬೆಂಗಳೂರು: ಯಾವುದೇ ನಿರೀಕ್ಷೆ ಇಲ್ಲದೇ ಅಂಗವಿಕರಲು ಹಾಗೂ ಮಾನಸಿಕ ಅಸ್ವಸ್ಥರ ಆರೈಕೆ ಶ್ಲಾಘನೀಯವಾದುದು. ಅಂತಹ ಕಾರ್ಯದಲ್ಲಿ ತೊಡಗಿರುಉವರಿಗೆ ಸಾರ್ವಜನಿಕರು ಪ್ರೋತ್ಸಾಹ ನೀಡುವ ಅಗತ್ಯವಿದೆ ಎಂದು ಅಂಗವಿಕಲರ ಹಕ್ಕುಗಳ ಅಧಿನಿಯಮದ ರಾಜ್ಯ ಆಯುಕ್ತ ದಾಸ್ ಸೂರ್ಯವಂಶಿ ಹೇಳಿದ್ದಾರೆ.

ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ವಿಕಲಚೇತನರ ಮತ್ತು ಹಿರಿಯನಾಗರಿಕರ ಸಬಲೀಕರಣ ಇಲಾಖೆ ಹಾಗೂ ವಿಕಲಚೇತನರು ಮತ್ತು ಹಿರಿಯ ನಾಗರಿಕರ ನಿರ್ದೇಶನಾಲಯ ಹಾಗೂ ವಿವಿಧ ಸ್ವಯಂಸೇವಾ ಸಂಸ್ಥೆಗಳ ಸಹಯೋಗದಲ್ಲಿ ಕಬ್ಬನ್ ಉದ್ಯಾನದ ಬಾಲಭವನದಲ್ಲಿ ಹಮ್ಮಿಕೊಂಡಿದ್ದ ‘ವಿಶ್ವ ಆರೈಕೆದಾರರ ದಿನಾಚರಣೆ- 2025’ ಉದ್ಘಾಟಿಸಿ ಮಾತನಾಡಿದರು.

ಅಂಗವಿಕಲರು ಹಾಗೂ ಮಾನಸಿಕ ಅಸ್ವಸ್ಥರ ಆರೈಕೆ ಸುಲಭದ ಮಾತಲ್ಲ. ಇದಕ್ಕಾಗಿ ತಮ್ಮ ವೈಯಕ್ತಿಕ ಜೀವನ ಸುಖ ಸಂತೋಷಗಳನ್ನು ಬದಿಗಿಡಬೇಕಾಗುತ್ತದೆ. ಅಂತಹ 8 ಆರೈಕೆದಾರರನ್ನು ಗುರುತಿಸಿ ಸನ್ಮಾನಿಸಿರುವುದು ಉತ್ತಮ ಕಾರ್ಯ ಎಂದರು.

ಈ ವರ್ಷ ‘ಸದೃಢ ಆರೈಕೆದಾರರು- ಸದೃಢ ಸಮಾಜ’ ಎಂಬ ಘೋಷವಾಕ್ಯದೊಂದಿಗೆ ವಿಶ್ವ ಆರೈಕೆದಾರರ ದಿನ ಆಚರಿಸಲಾಗುತ್ತಿದೆ. ಅಂಗವಿಕಲರ ಮಕ್ಕಳನ್ನು ಆರೈಕೆ ಮಾಡುವವವರಿಗೆ ಸರ್ಕಾರ ಮಾಸಿಕ ಭತ್ಯೆ ನೀಡುವ ಯೋಜನೆ ಜಾರಿಗೆ ತಂದಿರುವುದು ಸ್ವಾಗತಾರ್ಹ ಎಂದು ಹೇಳಿದರು.

ಅಭಿವೃದ್ಧಿಗೆ ಯೋಜನೆ:

2011ರ ಜನಗಣತಿ ಪ್ರಕಾರ ರಾಜ್ಯದಲ್ಲಿ ಸುಮಾರು 13 ಲಕ್ಷ ಅಂಗವಿಕಲರಿದ್ದಾರೆ. ತೀವ್ರ ಪ್ರಮಾಣದ ಅಂಗವಿಕಲತೆ ಹೊಂದಿರುವವರು 3 ಲಕ್ಷ ಮಂದಿ ಇದ್ದಾರೆ. ಇಂತಹವರ ಬಗ್ಗೆ ಸರ್ಕಾರ ಗಮನಹರಿಸಿ ಅವರ ಅಭಿವೃದ್ಧಿಗಾಗಿ ಹಲವಾರು ಯೋಜನೆಗಳನ್ನು ಜಾರಿಗೊಳಿಸಬೇಕು ಎಂದು ಅಂಗವಿಕಲ ವ್ಯಕ್ತಿಗಳ ಹಕ್ಕುಗಳ ಅಧಿನಿಯಮದ ಮಾಜಿ ಆಯುಕ್ತ ರಾಜಣ್ಣ ಸರ್ಕಾರಕ್ಕೆ ಮನವಿ ಮಾಡಿದರು.

ಮನೋರೋಗ ತಜ್ಞ ಡಾ.ಸಿ.ಆರ್. ಚಂದ್ರಶೇಖರ್, ನಿಮ್ಹಾನ್ಸ್‌ನ ಪ್ರಾಧ್ಯಾಪಕರು ಮತ್ತು ಮನೋವೈದ್ಯ ವಿಭಾಗದ ಮುಖ್ಯಸ್ಥ ಡಾ.ಜಗದೀಶ ತೀರ್ಥಹಳ್ಳಿ, ಬೆಂಗಳೂರು ಚಾಣಕ್ಯ ವಿವಿ ಕುಲಪತಿ ಡಾ.ಎಂ.ಕೆ. ಶ್ರೀಧರ್, ಆರೋಗ್ಯ ಸೌಧದ ಮಾನಸಿಕ ಆರೋಗ್ಯ ವಿಭಾಗದ ಉಪ ನಿರ್ದೇಶಕಿ ಡಾ. ರಜನಿ ಇತರರಿದ್ದರು.

ಕೋಟ್:

ಬೆಂಗಳೂರಿನಲ್ಲಿ ಅಂಗವಿಕಲರ ಸಬಲೀಕರಣಕ್ಕಾಗಿ ಡಿ. 5ರಿಂದ 7ರವರೆಗೆ ‘ಪರ್ಪಲ್ ಫೆಸ್ಟ್’ ಕಾರ್ಯಕಮ ಆಯೋಜಿಸಲಾಗುತ್ತಿದ್ದು, ಆರೈಕೆದಾರರ ಅಭಿವೃದ್ಧಿಗಾಗಿ ಏನೇನು ಮಾಡಬೇಕು ಎಂಬುದರ ಬಗ್ಗೆ ವಿಚಾರಸಂಕಿರಣ ಏರ್ಪಡಿಸಲಾಗುವುದು.

-ದಾಸ್ ಸೂರ್ಯವಂಶಿ, ಅಂಗವಿಕಲರ ಹಕ್ಕುಗಳ ಅಧಿನಿಯಮದ ರಾಜ್ಯ ಆಯುಕ್ತ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net