

ಶಹಾಬಜಾರ ಯುಪಿಎಚ್‌ಸಿಯಲ್ಲಿ ವಿಶ್ವ ಕ್ಯಾನ್ಸರ್ ಜಾಗೃತಿ ದಿನಾಚರಣೆ
ಕಲಬುರಗಿ : ವಯಸ್ಸು, ಲಿಂಗ, ಅನುವಂಶೀಯತೆ, ಪರಿಸರದ ಅಂಶಗಳು, ರಾಸಾಯನಿಕ ವಸ್ತುಗಳ ಸೇವನೆ, ತಂಬಾಕು, ಆಲ್ಕೋಹಾಲ್, ವಿಷಪೂರಿತ ಆಹಾರದ ಸೇವನೆ, ಎಚ್.ಸಿ.ಬಿ, ಎಚ್.ಬಿ.ವಿ, ಇ.ಬಿ.ವಿ ಬ್ಯಾಕ್ಟಿರೀಯಾ, ಕೆಲವು ಔಷಧಗಳ ನಿರಂತರ ಸೇವನೆಯಂತಹ ಮುಂತಾದ ಕಾರಣಗಳಿಂದ ಕ್ಯಾನ್ಸರ್ ರೋಗ ಬರುತ್ತದೆ. ತಂಬಾಕು, ಮದ್ಯಪಾನ, ರಾಸಾಯನಿಕಯುಕ್ತ ಆಹಾರ ಸೇವನೆ ಮಾಡಿರುವುದು, ಸಮತೋಲಿತ ಆಹಾರ ಸೇವಿಸುವುದು, ತೂಕ ನಿರ್ವಹಣೆ ಮಾಡುವುದು ಸೇರಿದಂತೆ ಮುಂತಾದ ಆರೋಗ್ಯಕರ ಜೀವನ ಶೈಲಿಯ ಕ್ರಮಗಳನ್ನು ಕೈಗೊಳ್ಳುವ ಮೂಲಕ ಕ್ಯಾನ್ಸರ್ ರೋಗ ಬರದಂತೆ ತಡೆಯಬಹುದಾಗಿದೆ ಎಂದು ವೈದ್ಯಾಧಿಕಾರಿ ಡಾ.ಅನುಪಮಾ ಎಸ್.ಹೇಳಿದರು.
ನಗರದ ಶೇಖರೋಜಾದಲ್ಲಿರುವ ಶಹಾಬಜಾರ ಯುಪಿಎಚ್‌ಸಿಯಲ್ಲಿ ‘ಬಸವೇಶ್ವರ ಸಮಾಜ ಸೇವಾ ಬಳಗ’ದ ಸಹಯೋಗದೊಂದಿಗೆ ಗುರುವಾರ ಜರುಗಿದ ‘ವಿಶ್ವ ಕ್ಯಾನ್ಸರ್ ಜಾಗೃತಿ ದಿನಾಚರಣೆ’ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡುತ್ತಿದ್ದರು.
ಆಧುನಿಕ ಒತ್ತಡದ ಬದುಕಿನಲ್ಲಿ ಕ್ಯಾನ್ಸರ್ ಪ್ರಮಾಣ ಹೆಚ್ಚಾಗಿದೆ. ದೇಹದಲ್ಲಿ ಜೀವಕೋಶಗಳ ಅಸಾಮಾನ್ಯ ಬೆಳವಣಿಗೆಯಾಗುತ್ತವೆ. ಕ್ಯಾನ್ಸರ್‌ನಲ್ಲಿ ೨೦೦ ಪ್ರಕಾರಗಳಿವೆ. ಚರ್ಮದಲ್ಲಿ ಗಂಟು ಹಾಗೂ ಹಳದಿ ಬಣ್ಣಕ್ಕೆ ತಿರುಗುವುದು, ತೂಕದಲ್ಲಿ ಹೆಚ್ಚಳ ಅಥವಾ ನಷ್ಟ, ಉಸಿರಾಟದ ತೊಂದರೆ, ನಿರಂತರವಾದ ಕೀಲುನೋವು, ರಕ್ತಸ್ರಾವವಾಗುವುದು ಲಕ್ಷಣಗಳಾಗಿವೆ. ಆರಂಭದಲ್ಲಿ ಇದನ್ನು ಗುರ್ತಿಸಿ, ಚಿಕಿತ್ಸೆ ಪಡೆದರೆ ಗುಣಮುಖರಾಗಲು ಸಾಧ್ಯವಿದೆ. ಕ್ಯಾನ್ಸರ್ ರೋಗಿಗಳ ಬಗ್ಗೆ ಕೀಳರಿಮೆ ಬೇಡ. ಭಯ ಬೇಡ, ಮುಂಜಾಗ್ರತೆ ವಹಿಸಿ ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ಬಳಗದ ಅಧ್ಯಕ್ಷ ಹಾಗೂ ಉಪನ್ಯಾಸಕ ಎಚ್.ಬಿ.ಪಾಟೀಲ, ಸಮಾಜ ಸೇವಕ ಶಿವಯೋಗೆಪ್ಪಾ ಎಸ್. ಬಿರಾದಾರ, ಆರೋಗ್ಯ ಕೇಂದ್ರದ ಸಿಬ್ಬಂದಿಗಳಾದ ಗುರುರಾಜ ಕೈನೂರ್, ಜಗನಾಥ ಗುತ್ತೇದಾರ, ಗಂಗಾಜ್ಯೋತಿ ಗಂಜಿ, ರೇಷ್ಮಾ ನಕ್ಕುಂದಿ, ನಾಗೇಶ್ವರಿ ಮುಗಳಿವಾಡಿ, ಸಂಗಮ್ಮ ಅತನೂರ್, ಮಂಗಲಾ ಚಂದಾಪುರೆ, ಲಕ್ಷಿö್ಮÃ, ಶ್ರೀದೇವಿ, ಅರ್ಚನಾ, ಅನಿತಾ, ನಾಗಮ್ಮ ಚಿಂಚೋಳಿ ಸೇರಿದಂತೆ ಮತ್ತಿತರರಿದ್ದರು.