ಯಕ್ಷಗಾನದಲ್ಲಿ ಮುದ್ರೆಗೆ ಪ್ರಾಮುಖ್ಯ: ಆನಂದ ಸಿ.ಕುಂದರ್

yaksha mudra
yaksha mudra
Published on

ವಿಜಯವಾಣಿ ಸುದ್ದಿಜಾಲ ಕೋಟ

ಯಕ್ಷಗಾನ ಬೆಳವಣಿಗೆಗೆ ಪೂರಕವಾಗಿರಬೇಕಾದ ಅಭಿನಯ ಮತ್ತು ಮುದ್ರೆಗಳ ಬಗ್ಗೆ ಹಮ್ಮಿಕೊಂಡ ಯಕ್ಷ ಮುದ್ರಾ ಕಾರ್ಯಾಗಾರ ಕಲಾವಿದರಿಗೆ ಉಪಯುಕ್ತವಾದದ್ದು. ಭರತನಾಟ್ಯದಂತಹ ಕಲೆಗಳಲ್ಲಿ ಪ್ರಾಮುಖ್ಯ ಪಡೆದಿರುವ ಹಸ್ತ ಮುದ್ರೆಗಳನ್ನು ಯಕ್ಷಗಾನದಲ್ಲಿ ಅಳವಡಿಸಿದಾಗ ಯಕ್ಷಗಾನಕ್ಕೆ ಶೋಭೆ ಬರುತ್ತದೆ ಎಂದು ಕಲಾ ಕೇಂದ್ರದ ಅಧ್ಯಕ್ಷ ಆನಂದ ಸಿ.ಕುಂದರ್ ಹೇಳಿದರು.

ಕಲಾಕೇಂದ್ರದ ಸ್ಥಾಪಕ ಪ್ರಾಚಾರ್ಯ ಎಂ.ನಾರ್ಣಪ್ಪ ಉಪ್ಪೂರರ 40ನೇ ಪುಣ್ಯಸರಣೆ ನೆನಪಿನಲ್ಲಿ ಹಂಗಾರಕಟ್ಟೆ ಐರೋಡಿ ಯಕ್ಷಗಾನ ಕಲಾಕೇಂದ್ರ, ಪೂರ್ಣಚಂದ್ರ ಯಕ್ಷಕಲಾ ಪ್ರತಿಷ್ಠಾನ ಕೊಂಡದಕುಳಿ ಆಯೋಜಿಸಿದ್ದ ಯಕ್ಷಮುದ್ರಾ ಯಕ್ಷಗಾನ ಅಭಿನಯ ಮುದ್ರೆಗಳ ಕಾರ್ಯಾಗಾರದಲ್ಲಿ ಮಾತನಾಡಿದರು.

ವಿದ್ಯಾವಂತರು ಇಂದು ಕಲೆ, ಸಂಸ್ಕೃತಿಯತ್ತ ಒಲವು ತೋರಿಸುತ್ತಿರುವಾಗ ಯಕ್ಷಗಾನ ಕಲಾವಿದರು ಈ ಬಗ್ಗೆ ಜಾಗೃತರಾಗಬೇಕು. ಯಕ್ಷಗಾನ ಉಳಿವಿನ ಬಗ್ಗೆ ಕಳೆದ 50 ವರ್ಷಗಳಿಂದ ಶ್ರಮಿಸುತ್ತಿರುವ ಹಂಗಾರಕಟ್ಟೆ ಐರೋಡಿ ಯಕ್ಷಗಾನ ಕಲಾಕೇಂದ್ರದ ಪರಿಶ್ರಮ ನಿಜಕ್ಕೂ ಶ್ಲಾಘನೀಯ ಎಂದರು.

ಹಿರಿಯ ಕಲಾವಿದ ಕೊಂಡದಕುಳಿ ರಾಮಚಂದ್ರ ಹೆಗ್ಡೆ, ನಾಟ್ಯ ವಿದುಷಿ ಸುಮಂಗಲಾ ರತ್ನಾಕರ, ಪ್ರಾಚಾರ್ಯ ಸದಾನಂದ ಐತಾಳ, ಎಂ.ನಾರ್ಣಪ್ಪ ಉಪ್ಪೂರರ ಪುತ್ರ ದಿನೇಶ ಉಪ್ಪೂರ ಉಪಸ್ಥಿತರಿದ್ದರು.

ಕಲಾಕೇಂದ್ರದ ಕಾರ್ಯದರ್ಶಿ ರಾಜಶೇಖರ ಹೆಬ್ಬಾರ ಸ್ವಾಗತಿಸಿದರು. ಸದಾನಂದ ಐತಾಳ ಕಾರ್ಯಾಗಾರದ ಉದ್ದೇಶ ವಿವರಿಸಿದರು. ಪತ್ರಕರ್ತ ಅಂಬರೀಶ್ ಭಟ್ಟ ಸಂಯೋಜಿಸಿದ್ದರು. ಕನ್ನಡ ಸಾಹಿತ್ಯ ಪರಿಷತ್ ಬ್ರಹ್ಮಾವರ ಘಟಕ ಅಧ್ಯಕ್ಷ ರಾಮಚಂದ್ರ ಐತಾಳ ಕಾರ್ಯಕ್ರಮ ನಿರೂಪಿಸಿ, ವಂದಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net