ಎಸ್.ಎ.ಟಿ. ವಿದ್ಯಾಸಂಸ್ಥೆಯಲ್ಲಿ ಕಾರ್ಯಾಗಾರ ಸಮಾರೋಪ

school
Published on

ಮಂಜೇಶ್ವರ: ಶ್ರೀಮದ್ ಅನಂತೇಶ್ವರ ದೇವಳದ ಶಾಲೆಗಳ ಶತಮಾನೋತ್ಸವದ ಪ್ರಯುಕ್ತ ಶಾಲಾ ಲಿಟಲ್ ಕೈಟ್ ಹಾಗೂ ಟೀಂ ಶಾಸ್ತ್ರ ಜಂಟಿ ಆಶ್ರಯದಲ್ಲಿ ಎರಡು ದಿನಗಳ ಮಾಹಿತಿ ತಂತ್ರಜ್ಞಾನ ಆಧಾರಿತ ಕಾರ್ಯಾಗಾರದ ಸಮಾರೋಪ ಇತ್ತೀಚೆಗೆ ಶಾಲೆಯಲ್ಲಿ ಜರುಗಿತು.

ಶಾಲಾ ಕರೆಸ್ಪಾಂಡೆಂಟ್ ನಿತಿನ್ ಚಂದ್ರ ಪೈ ಅಧ್ಯಕ್ಷತೆ ವಹಿಸಿದ್ದರು. ಕಾರ್ಯಾಗಾರ ನಡೆಸಿಕೊಟ್ಟ ಮಂಗಳೂರಿನ ಕೆನರಾ ಹಾಗೂ ಸಹ್ಯಾದ್ರಿ ಇಂಜಿನಿಯರಿಂಗ್ ಕಾಲೇಜಿನ ಟೀಮ್ ಶಾಸ್ತ್ರದ ಸದಸ್ಯರನ್ನು ಗೌರವಿಸಲಾಯಿತು. ಲಿಟಲ್ ಕೈಟ್ ವಿದ್ಯಾರ್ಥಿಗಳು ಕಾರ್ಯಾಗಾರದ ಬಗ್ಗೆ ಅನಿಸಿಕೆ ವ್ಯಕ್ತಪಡಿಸಿದರು. ವೇದಿಕೆಯಲ್ಲಿ ಪ್ರೌಢಶಾಲಾ ಶಿಕ್ಷಕ ಪೂರ್ಣಯ್ಯ ಪುರಾಣಿಕ್, ಶಾಂತೇರಿ ಶೆಣೈ, ಐಟಿ ಕೋ ಆರ್ಡಿನೇಟರ್ ಕಿರಣ್ ಕುಮಾರ್, ಸುಷ್ಮಾ, ಲಕ್ಷ್ಮೀದಾಸ್ ಪ್ರಭು ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net