ರೈತರ ಶ್ರೇಯೋಭಿವೃದ್ಧಿಗೆ ಶ್ರಮಿಸುವೆ

ರೈತರ ಶ್ರೇಯೋಭಿವೃದ್ಧಿಗೆ ಶ್ರಮಿಸುವೆ
Published on

ತಿ.ನರಸೀಪುರ: ಕಾಡಾ ರೈತರ ಪರವಾದ ನಿಗಮವಾಗಿದ್ದು, ನಿರೀಕ್ಷೆಗೂ ಮೀರಿ ಕೆಲಸ ಮಾಡುವ ಮೂಲಕ ರೈತರ ಕಷ್ಟ, ದುಃಖಗಳಿಗೆ ಸ್ಪಂದಿಸುವ ಪ್ರಾಮಾಣಿಕ ಪ್ರಯತ್ನ ಮಾಡಲಿದ್ದೇನೆ ಎಂದು ಕಾಡಾ ನಿಗಮದ ನೂತನ ಅಧ್ಯಕ್ಷ ಮರಿಸ್ವಾಮಿ ಹೇಳಿದರು.

ತಾಲೂಕಿನ ವಾಟಾಳು ಮಠಕ್ಕೆ ಭಾನುವಾರ ಭೇಟಿ ನೀಡಿ ಶ್ರೀ ಸಿದ್ದಲಿಂಗಶಿವಾಚಾರ್ಯ ಸ್ವಾಮೀಜಿ ಅವರ ಆಶೀರ್ವಾದ ಪಡೆದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದರು.

ರೈತನ ಮಗನಾಗಿರುವುದರಿಂದ ಅವರ ಕಷ್ಟ ಸುಖಗಳನ್ನು ಹತ್ತಿರದಿಂದ ಬಲ್ಲವನಾಗಿದ್ದು, ಅನ್ನದಾತರ ಶ್ರೇಯೋಭಿವೃದ್ಧಿಗೆ ಶ್ರಮಿಸುತ್ತೇನೆ ಎಂದರು.

ಕೊಳ್ಳೇಗಾಲ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ತೋಟೇಶ್, ಎಪಿಎಂಸಿ ಮಾಜಿ ಅಧ್ಯಕ್ಷ ಆಲ್ದೂರು ರಾಜಶೇಖರ್, ಶಂಕರಮೂರ್ತಿ, ಶಿವಸ್ವಾಮಿ, ರವಿಕುಮಾರ್, ಡಿ.ಪಿ.ಪ್ರಕಾಶ್, ಸಿದ್ದಲಿಂಗಸ್ವಾಮಿ, ಪ್ರಭುಸ್ವಾಮಿ, ಶಿವಸ್ವಾಮಿ, ಪ್ರಕಾಶ್, ಬೂದಂಬಳ್ಳಿ ಶಂಕರ್, ಕಿಟ್ಟಪ್ಪ, ಮಹದೇವ ಸ್ವಾಮಿ, ಗ್ರಾಪಂ ಮಾಜಿ ಅಧ್ಯಕ್ಷ ಬಿಎಂಕೆ ಹುಂಡಿ ಮಹದೇವು ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net