ಕಾರ್ಮಿಕರಿಗೆ ಸಂಪೂರ್ಣ ಸುರಕ್ಷತೆ ಅಗತ್ಯ

Workers need complete safety
ಸೂದಾಪೂರ-ಸಮೀರವಾಡಿಯ ಗೋದಾವರಿ ಬಯೋರಿೈನರೀಸ್ ಕಾರ್ಖಾನೆಯಲ್ಲಿ ಆಯೋಜಿಸಿದ್ದ ರಾಷ್ಟ್ರೀಯ ಸುರಕ್ಷತಾ ಕಾರ್ಯಕ್ರಮವನ್ನು ಕಾರ್ಖಾನೆಯ ಸಿಟಿಒ ದಿನೇಶ ಶರ್ಮಾ ಉದ್ಘಾಟಿಸಿದರು. ಕಾರ್ಯನಿರ್ವಾಹಕ ನಿರ್ದೇಶಕ ಬಿ.ಆರ್.ಬಕ್ಷಿ, ಇಂಜಿನಿಯರಿಂಗ್ ವಿಭಾಗದ ಜಿಎಂ ವಿ.ಕೆ. ಕಿಲಾರಿ ಇದ್ದಾರೆ.
Published on

ಮಹಾಲಿಂಗಪೂರ: ಕಾರ್ಮಿಕರ ಸುರಕ್ಷತೆಯೆಂದರೆ ಕೆಲಸದ ಸ್ಥಳದಲ್ಲಿ ಅಪಾಯ ತಪ್ಪಿಸುವುದು ಮಾತ್ರವಲ್ಲದೆ, ಕಾರ್ಮಿಕರ ದೈಹಿಕ, ಮಾನಸಿಕ ಹಾಗೂ ಭಾವನಾತ್ಮಕ ಯೋಗಕ್ಷೇಮದ ಕಾಳಜಿ ವಹಿಸುವುದಾಗಿದೆ ಎಂದು ಗೋದಾವರಿ ಬಯೋರಿಫೈನರೀಸ್ ಸಿಟಿಒ ದಿನೇಶ ಶರ್ಮಾ ತಿಳಿಸಿದರು.

ಸೂದಾಪೂರ-ಸಮೀರವಾಡಿಯ ಗೋದಾವರಿ ಬಯೋರಿಫೈನರೀಸ್‌ನಲ್ಲಿ ಇತ್ತೀಚೆಗೆ ಆಯೋಜಿಸಿದ್ದ 54ನೇ ರಾಷ್ಟ್ರೀಯ ಸುರಕ್ಷತಾ ದಿನಾಚರಣೆಯಲ್ಲಿ ಅವರು ಮಾತನಾಡಿದರು.

ಇಂಜನಿಯರಿಂಗ್ ವಿಭಾದ ಜಿಎಂ ವಿ.ಕೆ. ಕಿಲಾರಿ ರಾಷ್ಟ್ರೀಯ ಸುರಕ್ಷತಾ ಇತಿಹಾಸದ ಬಗ್ಗೆ ಮಾತನಾಡಿದರು. ಜಿಎಂ ವಿ.ಎಸ್. ಕನಬೂರ ಸುರಕ್ಷತಾ ಧ್ವಜಾರೋಹಣ ನೆರವೇರಿಸಿದರು.

ಮುಖ್ಯಅತಿಥಿಗಳಾಗಿ ಕಾರ್ಖಾನೆಯ ಕಾರ್ಯನಿರ್ವಾಹಕ ನಿರ್ದೇಶಕ ಬಿ.ಆರ್. ಬಕ್ಷಿ, ನಂದಕುಮಾರ, ಡಿ.ಎನ್. ಪಾಟೀಲ, ಎಂ.ವಿ. ಕಡಿವಾಳ, ಆರ್.ವಿ. ಸೋನವಾಲಕರ, ರವಿ ದೇಶಪಾಂಡೆ, ಕಲಪೇಶ ಬಾಂದೇಕರ, ಬಸು ಮೇಲಪ್ಪಗೋಳ, ಬಸವರಾಜ ಭದ್ರಶೆಟ್ಟಿ ಮತ್ತಿತರರಿದ್ದರು. ಎಂ. ರಾಮಚಂದ್ರ ನಿರೂಪಿಸಿದರು. ಆನಂದ ಕೋಟಬಾಗಿ ವಂದಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net