ವಿದ್ಯುತ್​ ಸ್ಪರ್ಶಿಸಿ ಕಾರ್ಮಿಕ ಗಂಭೀರ

Published on

ಕನಕಪುರ: ಮನೆಯೊಂದರ ಮೇಲ್ಮಹಡಿ ನಿರ್ಮಿಸುತ್ತಿದ್ದ ಕಾರ್ಮಿಕನಿಗೆ ವಿದ್ಯುತ್​ ತಗುಲಿ ಗಂಭೀರ ಗಾಯಗೊಂಡಿದ್ದಾರೆ. ಇಲ್ಲಿನ ಬಸವೇಶ್ವರ ನಗರದ ಕಾರ್ಮಿಕ ಕರಿಯಪ್ಪ(45) ಗಾಯಾಳು. ಭಾನುವಾರ ಸಂಜೆ ಮನೆಯೊಂದರ ಮೇಲ್ಮಹಡಿ ನಿರ್ಮಿಸುವಾಗ ಮನೆ ಮೇಲೆ ಹಾದು ಹೋಗಿರುವ 60/60 ಕೆವಿ ಲೈನ್​ ತಾಕಿದೆ. ವಿದ್ಯುತ್​ ಸ್ಪರ್ಶದಿಂದ ಗಂಭೀರ ಗಾಯಗೊಂಡ ಕರಿಯಪ್ಪ ಅವರನ್ನು ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಅವಡದ ಮಾಹಿತಿ ತಿಳಿದು ಕೆಪಿಟಿಸಿಎಲ್​ ಕಾರ್ಯಪಾಲಕ ಅಭಿಯಂತ ರಂಜಿತ್​ ಸ್ಥಳ ಪರಿಶೀಲಿಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net