ಕೆಲಸ ಮಾಡುವಾಗಲೇ ಕಾರ್ಮಿಕ ಮೃತ

Published on

ಪಾತಪಾಳ್ಯ: ಬಾಗೇಪಲ್ಲಿ ತಾಲೂಕಿನ ತೋಳ್ಳಪಲ್ಲಿ ಗ್ರಾಪಂ ವ್ಯಾಪ್ತಿಯ ಕೊಂಡಿರೆಡ್ಡಿಪಲ್ಲಿಯಲ್ಲಿ ನರೇಗಾ ಯೋಜನೆಯಡಿ ಕಾಮಗಾರಿ ಮಾಡುತ್ತಿದ್ದಾಗಲೇ ಕೆಲಸಗಾರನೋರ್ವ ಮಂಗಳವಾರ ಹೃದಯಾಘಾತದಿಂದ ಮೃತಪಟ್ಟಿದ್ದಾರೆ.

ಕೊಂಡಿರೆಡ್ಡಿ (58) ಮೃತ. ಮೃತರಿಗೆ ಇಬ್ಬರು ಪುತ್ರಿಯರು ಇದ್ದಾರೆ. ಕೋಡಿರೆಡ್ಡಿಪಲ್ಲಿ ಗ್ರಾಮದಲ್ಲಿ ಅಂತ್ಯಕ್ರಿಯೆ ನೆರವೇರಿಸಲಾಯಿತು.

ಸ್ಥಳಕ್ಕೆ ನರೇಗಾ ತಾಲೂಕು ಸಹಾಯಕ ನಿರ್ದೇಶಕ ಜಿ.ವಿ.ನಾರಾಯಣ, ಪಿಡಿಒ ಕೆ.ವಿ.ನಾರಾಯಣಸ್ವಾಮಿ, ತಾಪಂ ಐಇಸಿ ಸಂಯೋಜಕ ಎ.ಸಿ.ರವಿ, ಎಸ್‌ಡಿಎ ಮಾರಪ್ಪ, ಗ್ರಾಪಂ ಅಧ್ಯಕ್ಷೆ ಲಲಿತಾ ಈಶ್ವರರೆಡ್ಡಿ, ಉಪಾಧ್ಯಕ್ಷ ವೈ.ವಿ.ಆಂಜನೇಯ ಭೇಟಿ ನೀಡಿ ಮೇಲಾಧಿಕಾರಿಗಳ ಗಮನಕ್ಕೆ ತರುವುದಾಗಿ ತಿಳಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net