ತಲೆಗೆ ಕಬ್ಬಿಣ ಬಡಿದು ಕಾರ್ಮಿಕ ಸಾವು

Published on

ದೇವಾಲಯ ಗೋಪುರ ನಿರ್ಮಾಣಕ್ಕೆ ಅಳವಡಿಸಿದ್ದ ಲಿಫ್ಟ್‌ನಲ್ಲಿ ಅವಘಡ

ಚಿಂತಾಮಣಿ : ತಾಲೂಕಿನ ತಾಲೂಕಿನ ಮಿಂಡಿಗಲ್ ಗ್ರಾಮದ ಚೌಡೇಶ್ವರಿ ದೇವಾಲಯದ ಗೋಪುರ ನಿರ್ಮಾಣದ ಕೆಲಸಕ್ಕೆ ಬಂದಿದ್ದ ಕಾರ್ಮಿಕ ಲಿಫ್ಟ್‌ನಲ್ಲಿ ಹೋಗುತ್ತಿದ್ದಾಗ ಕಬ್ಬಿಣ ತಲೆಗೆ ಬಡಿದು ಮೃತಪಟ್ಟಿದ್ದಾನೆ

ತಮಿಳುನಾಡಿನ ಮೈಲಾಡುತುರೈ ಜಿಲ್ಲೆಯ ವಲಂ ಗ್ರಾಮದ ಮಾಧವನ್ (30) ಮೃತ.

ಗುರುವಾರ ಮಧ್ಯಾಹ್ನ 12 ಗಂಟೆ ಸಮಯದಲ್ಲಿ ಗೋಪುರದ ನಿರ್ಮಾಣಕ್ಕೆ ಬೇಕಾದ ಸಾಮಗ್ರಿಗಳನ್ನು ತಾತ್ಕಾಲಿಕವಾಗಿ ಅಳವಡಿಸಿದ್ದ ಲ್‌ಟಿನಲ್ಲಿ ತುಂಬಿಸಿಕೊಂಡು ಮೇಲಕ್ಕೆ ಹೋಗುತ್ತಿದ್ದಾಗ ಜೇನುಹುಳು ಮಾಧವನ್ ಬಳಿ ಬಂದಿದೆ. ಹುಳದಿಂದ ತಪ್ಪಿಸಿಕೊಳ್ಳಲು ಮುಂದಾದ ಮಾಧವನ್ ತಲೆಯನ್ನು ಲ್‌ಟಿ ಆವರಣದಿಂದ ಹೊರಕ್ಕೆ ಬಾಗಿದಾಗ ಅಡ್ಡಬಂದ ಕಬ್ಬಿಣದ ಆಂಗಲ್ ಬಡಿದಿದೆ. ಜೋರಾಗಿ ಕಿರುಚಿಕೊಂಡ ಶಬ್ದ ಕೇಳಿದ ಇತರ ಕಾರ್ಮಿಕರು, ಲ್‌ಟಿನಲ್ಲಿದ್ದ ಮಾಧವನ್ ಅವರನ್ನು ಹೊರತಂದಿದ್ದಾರೆ. ಮಾಧವನ್ ತಲೆ ಹಿಂಭಾಗ ಹಾಗೂ ಎಡಕಿವಿ, ದವಡೆಯಿಂದ ಬಾಯಿಯವರೆಗೆ ಸೀಳಿಕೊಂಡು ಗಾಯವಾಗಿದ್ದನ್ನು ಕಂಡು ಕೂಡಲೇ ಆಸ್ಪತ್ರೆಗೆ ಕರೆದೊಯ್ದು ಚಿಕಿತ್ಸೆ ಕೊಡಿಸುವಷ್ಟರಲ್ಲಿ ಮೃತಪಟ್ಟಿದ್ದಾರೆ.

ಮಲೇಷಿಯಾದ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದ ಮಾಧವನ್ ಒಂದು ವರ್ಷದ ಹಿಂದೆ ಸ್ವಗ್ರಾಮ ವಲಂಗೆ ವಾಪಸಾಗಿ ಕೃಷಿ ಮಾಡುತ್ತಿದ್ದರು. 4 ತಿಂಗಳ ಹಿಂದೆ ಮಿಂಡಿಗಲ್ ಗ್ರಾಮದ ಚೌಡೇಶ್ವರಿ ದೇವಾಲಯದ ಗೋಪುರ ನಿರ್ಮಾಣ ಕೆಲಸಕ್ಕೆ ಬಂದಿದ್ದರು ಎನ್ನಲಾಗಿದೆ.

ಘಟನೆ ಸಂಬಂಧ ಮೃತನ ತಂದೆ ಆರ್. ಶೇಖರ್ ಅವರು ನೀಡಿದ ದೂರಿನ ಮೇರೆಗೆ ಕೆಂಚಾರ‌್ಲಹಳ್ಳಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net