ಗಾಜಿನ ಚೂರು ಚುಚ್ಚಿ ಕಾರ್ವಿುಕ ದುರ್ಮರಣ

Death j
Published on

ಬೆಂಗಳೂರು: ಕೆ.ಎಚ್. ರಸ್ತೆಯಲ್ಲಿರುವ ನಿರ್ಮಾಣ ಹಂತದಲ್ಲಿದ್ದ ಕಟ್ಟಡದ ನವೀಕರಣ ಕಾಮಗಾರಿಯಲ್ಲಿ ತೊಡಗಿದ್ದ ಕಾರ್ವಿುಕನ ಕುತ್ತಿಗೆಗೆ ಗಾಜಿನ ಚೂರು ಚುಚ್ಚಿಕೊಂಡು ಮೃತಪಟ್ಟಿದ್ದಾನೆ.ಜೆ.ಜೆ. ನಗರದ ನಿವಾಸಿ ಇರ್ಫಾನ್ (27) ಮೃತ ಕಾರ್ವಿುಕ. ಆತನ ಭಾವ ಚಾಂದ್​ಪಾಷಾ ನೀಡಿದ ದೂರಿನ ಆಧಾರದ ಮೇರೆಗೆ ಪ್ರಕರಣ ದಾಖಲಿಸಿಕೊಂಡಿರುವ ವಿಲ್ಸನ್​ಗಾರ್ಡ್​ನ್ ಠಾಣೆ ಪೊಲೀಸರು, ಇರ್ಫಾನ್​ನನ್ನು ಕೆಲಸಕ್ಕೆ ಕರೆತಂದ ಮೇಸ್ತ್ರಿಯನ್ನು ಬಂಧಿಸಿದ್ದಾರೆ.

ಜೂ. 2ರಂದು ವಿಲ್ಸನ್​ಗಾರ್ಡನ್​ನ ಕೆ.ಎಚ್.ರಸ್ತೆಯ ನಿರ್ಮಾಣ ಹಂತದ ಕಟ್ಟಡದ 2ನೇ ಮಹಡಿಯ ನಡುಮನೆಯಲ್ಲಿ ಇರ್ಫಾನ್ ನವೀಕರಣ ಕೆಲಸ ಮಾಡುತ್ತಿದ್ದ. ಪಿಒಪಿ ತೆಗೆಯುತ್ತಿದ್ದಾಗ ತುಂಡಾಗಿ ಗಾಜುಗಳ ಮೇಲೆ ಬಿದ್ದು, ಅದರ ಚೂರು ಇರ್ಫಾನ್ ಕುತ್ತಿಗೆಗೆ ತಗುಲಿ ಗಂಭೀರವಾಗಿ ಗಾಯಗೊಂಡಿದ್ದ. ಸ್ಥಳದಲ್ಲಿದ್ದ ಇತರ ಕಾರ್ವಿುಕರು ಆಸ್ಪತ್ರೆಗೆ ಕರೆದೊಯ್ದರಾದರೂ ಚಿಕಿತ್ಸೆ ಫಲಕಾರಿಯಾಗದೆ ಇರ್ಫಾನ್ ಮೃತಪಟ್ಟಿದ್ದಾನೆ.

ಗುತ್ತಿಗೆದಾರರು ಮತ್ತು ಕಟ್ಟಡ ಮಾಲೀಕರು ಸೂಕ್ತ ರೀತಿಯಲ್ಲಿ ಸುರಕ್ಷತಾ ಕ್ರಮ ಕೈಗೊಳ್ಳದೆ ಇರುವುದರಿಂದ ಈ ದುರ್ಘಟನೆ ಸಂಭವಿಸಿದೆ. ಅವರ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಚಾಂದ್​ಪಾಷಾ ದೂರಿನಲ್ಲಿ ಉಲ್ಲೇಖಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net