ಭಕ್ತಿ ಮುದ್ರೆಯಿಲ್ಲದ ಕಾರ್ಯ ವ್ಯರ್ಥ

ratha
Published on

ವಿಜಯವಾಣಿ ಸುದ್ದಿಜಾಲ ಪಡುಬಿದ್ರಿ

ಭಕ್ತಿಯ ಮುದ್ರೆ ಇಲ್ಲಚಿ ಯಾವ ಕೆಲಸಕ್ಕೂ ಮೌಲ್ಯಗಳಿಲ್ಲ. ಜಿಲ್ಲೆಯಲ್ಲಿ ಮಧ್ವರು ಸಂದರ್ಶಿಸಿದ ಕ್ಷೇತ್ರಗಳನ್ನು ಸಂದರ್ಶಿಸಿ ಭಕ್ತರಿಗೆ ಭಕ್ತಿ ಸಿದ್ಧಾಂತ ತಿಳಿಸುವ ಉದ್ದೇಶವಿದೆ ಎಂದು ಪೇಜಾವರ ಮಠಾಧೀಶ ವಿಶ್ವಪ್ರಸನ್ನ ತೀರ್ಥ ಶ್ರೀಗಳು ಹೇಳಿದರು.

ರಾಮತಾರಕ ಮಂತ್ರದ ಮಹತ್ವ ಬೋಧನೆ ಹಾಗೂ ಭಕ್ತಿ ಸಿದ್ಧಾಂತ ಪ್ರಸಾರ ಮಾಡಲು ಹಮ್ಮಿಕೊಂಡಿರುವ ಭಕ್ತಿ ರಥಯಾತ್ರೆಗೆ ಆಚಾರ್ಯ ಮಧ್ವರ ಅವತಾರ ಸ್ಥಳ ಪಾಜಕದಲ್ಲಿ ಭಾನುವಾರ ಚಾಲನೆ ನೀಡಿ ಆಶೀರ್ವಚನ ನೀಡಿದರು.

ಮಧ್ವಾಚಾರ್ಯರ ಮನೆ ದೇವರಾದ ಶ್ರೀ ಅನಂತಪದ್ಮನಾಭ ದೇವರು ಮತ್ತು ಶ್ರೀ ವಾದಿರಾಜ ಪ್ರತಿಷ್ಠಿತ ಮಧ್ವಗುರುಗಳ ಮಂಗಳಾರತಿ ಬೆಳಗಿದರು. ಮಾಧವ ಉಪಾಧ್ಯಾಯರ ಮಾರ್ಗದರ್ಶನದಲ್ಲಿ ನಂದಳಿಕೆ ವಿಠಲ ಭಟ್ಟರು, ಮಧ್ವರಾಜ ಭಟ್, ವಾದಿರಾಜ ಭಟ್, ಶ್ರೀಕರ ಭಟ್ವರ ಸಹಯೋಗದಲ್ಲಿ ರಾಮತಾರಕ ಮಂತ್ರ ಹೋಮ ನೆರವೇರಿತು.

ಪ್ರಾಂತ ವಿಶ್ವಹಿಂದು ಪರಿಷತ್ ಅಧ್ಯಕ್ಷ ಪ್ರೊ.ಎಂ.ಬಿ.ಪುರಾಣಿಕ್, ಶಾಸಕ ಗುರ್ಮೆ ಸುರೇಶ ಶೆಟ್ಟಿ, ಮಠದ ದಿವಾನ ಎಂ.ರಘುರಾಚಾರ್ಯ, ಸುಬ್ರಹ್ಮಣ್ಯ ಭಟ್, ಭಕ್ತಿಸಿದ್ಧಾಂತೋತ್ಸವ ರಾಮೋತ್ಸವ ಸ್ವಾಗತ ಸಮಿತಿ ಪ್ರಧಾನ ಕಾರ್ಯದರ್ಶಿ ನಿಟ್ಟೆ ಪ್ರಸನ್ನಾಚಾರ್, ಪ್ರಮುಖರಾದ ರಾಘವೇಂದ್ರ ಭಟ್, ವಿನಯಪ್ರಸಾದ್ ಭಟ್, ದಿವ್ಯಾ ಆಚಾರ್ಯ, ಗೋವಿಂದ ಭಟ್, ವಿಕಾಸ್, ಸುಂದರ ಶೆಟ್ಟಿ, ಸದಾನಂದ ಶೆಣೈ, ಸುರೇಂದ್ರ ಶೆಟ್ಟಿ ಕುಳೆದು, ದಿನೇಶ ಶೆಟ್ಟಿ, ಪಟ್ಟಾಭಿರಾಮ ಆಚಾರ್ಯ, ಮಧ್ವರಾಜ ಭಟ್, ವಿಶ್ವನಾಥ ಶೆಟ್ಟಿ, ಸುದರ್ಶನ್ ರಾವ್, ವಿಶ್ವನಾಥ ಪೂಜಾರಿ ಉಪಸ್ಥಿತರಿದ್ದರು.

ಅನಂತ ಸಾಮಗ, ವಿಷ್ಣುಮೂರ್ತಿ ಆಚಾರ್ಯ, ಶ್ರೀಶ ನಾಯಕ್, ಗಿರಿಧರ ಐತಾಳ್, ಕೃಷ್ಣರಾಜ, ಸತೀಶ್ ಕುಮಾರ್, ಪ್ರಶಾಂತ್ ಶೆಟ್ಡಿ, ವಾಸುದೇವ ಭಟ್ ಸಹಕರಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net