ಇಸ್ಲಾಮಿಕ್ ಧಾರ್ಮಿಕತೆಯ ಕ್ರಿಯಾಶೀಲ ಮಾಸ

gan-2
Published on

ಕುಂದಾಪುರ: ರಮಜಾನ್ ಇಸ್ಲಾಮಿಕ್ ಧಾರ್ಮಿಕತೆಯ ಅತ್ಯಂತ ಕ್ರಿಯಾಶೀಲ ಮಾಸ. ಉಪವಾಸ, ಗ್ರಂಥ ಪಾರಾಯಣ, ದಾನ, ಆರಾಧನೆಯ ಪರಮೋಚ್ಛ ಅಭಿವ್ಯಕ್ತಿ ಎಂದು ಧರ್ಮಗುರು ಮೌಲಾನಾ ಮುಹಮ್ಮದ್ ಹಫೀಜ್ ರಜ್ವಿ ಹೇಳಿದರು.

ಹೆನ್ನಾಬೈಲ್ ಮುಹಿಯುದೀನ್ ಜುಮಾ ಮಸೀದಿ ವತಿಯಿಂದ ಹೆನ್ನಾಬೈಲ್ ಈದ್ಗಾ ಮೈದಾನದಲ್ಲಿ ರಮಜಾನ್ ಹಬ್ಬದ ಪ್ರಯುಕ್ತ ಈದುಲ್ ಫಿತ್ರ್ ಪ್ರಾರ್ಥನೆ ನೆರವೇರಿಸಿ ಮಾತನಾಡಿದರು.

ಪ್ರಸ್ತುತ ಜಗತ್ತಿನಲ್ಲಿ ಸ್ವಾರ್ಥಕ್ಕಾಗಿ ಧರ್ಮ ರಾಜಕೀಯದಲ್ಲಿದೆಯೇ ಹೊರತು ನೈಜ ಆಚರಣೆ ಮತ್ತು ಅಳವಡಿಕೆಯಲ್ಲಿ ಇಲ್ಲ. ಧರ್ಮದ ಆಚರಣೆ ಸೂಕ್ತ ಮತ್ತು ಸದೃಢವಾಗಿ ಜೀವಪರವಾಗಿ ಕಾಣಿಸದೆ ಇದ್ದಾಗ ಧರ್ಮದ ವಿಚಾರಗಳ ಮೇಲೆ ಅಪಚಾರ ಮತ್ತು ಅಪಪ್ರಚಾರಗಳು ನಡೆಯುತ್ತವೆ. ಧರ್ಮವನ್ನು ಸರಿಯಾಗಿ ಪ್ರತಿನಿಧಿಸುವ ಮತ್ತು ಆಚರಿಸುವ ಮಹತ್ವ ಹಾಗೂ ಅಗತ್ಯವನ್ನು ಅರಿಯಬೇಕು ಎಂದರು.

ಮಸೀದಿ ಆಡಳಿತ ಮಂಡಳಿ ಅಧ್ಯಕ್ಷ ಸೈಯದ್ ರಫೀಕ್, ಕಾರ್ಯದರ್ಶಿ ಮುಹಮ್ಮದ್ ಇಕ್ಬಾಲ್, ಮಾಜಿ ಅಧ್ಯಕ್ಷ ಸೈಯದ್ ಅಬ್ಬಾಸ್, ಹಸನ್ ಸಾಹೇಬ್, ಅಲಿಯಬ್ಬ ತೋಟದಮನೆ, ಇಬ್ರಾಹಿಂ ಸೈಯದ್, ಹಯಾತ್ ಭಾಷಾ, ಅಲ್ತಾಫ್ ಅಲಿ, ಬಾವಾ ಸಾಹೇಬ್, ಅಷ್ಫಾಕ್ ಸಾಬ್ಜನ್, ಆರೀಫ್ ಹಮೀದ್, ಆದಮ್ ಸಾಹೇಬ್, ಅಮಾನ್ ಜಮಾಲ್, ಅಶ್ರಫ್ ಕೋಟೇಶ್ವರ, ಅರ್ಷದ್ ಅಬ್ಬಾಸ್, ಶಬ್ಬೀರ್ ಸಾಹೇಬ್, ರಝಾಕ್ ಸಾಹೇಬ್, ಅಬ್ಬಾಸ್ ಅಲಿ ಮುಂತಾದವರು ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net