

ಸಿಎಸ್ಆರ್ ಅನುದಾನದಲ್ಲಿ ಇನ್ನಷ್ಟು ಪಬ್ಲಿಕ್ ಶಾಲೆಗಳು ಆರಂಭ
ಚನ್ನಪಟ್ಟಣ: ಎದೆಯೊಳಗೆ ಬಿದ್ದ ಅರ, ಭೂಮಿಗೆ ಬಿದ್ದ ಬೀಜ ಒಂದಲ್ಲ ಒಂದುದಿನ ಫಲ ಕೊಡುತ್ತದೆ. ಈ ಹಿನ್ನೆಲೆಯಲ್ಲಿ ಸಿಎಸ್ಆರ್ ಅನುದಾನದಲ್ಲಿ ಇನ್ನಷ್ಟು ಪಬ್ಲಿಕ್ ಶಾಲೆಗಳನ್ನು ತೆರೆಯಲು ಯೋಜನೆ ಮಾಡಿದ್ದೇವೆ. ಜನರ ವೇದನೆಗಳನ್ನು ತಿಳಿದು ಕೆಲಸ ಮಾಡಬೇಕು. ಅದನ್ನು ನಮ್ಮ ಸರ್ಕಾರ ಮಾಡುತ್ತಿದೆ ಎಂದು ಡಿಸಿಎಂ ಡಿ.ಕೆ.ಶಿವಕುಮಾರ್ ತಿಳಿಸಿದರು.
ತಾಲೂಕಿನ ಹೊಂಗನೂರು ಗ್ರಾಮದಲ್ಲಿ ಖಾಸಗಿಯವರು ಅಭಿವೃದ್ಧಿಪಡಿಸಿದ ಕರ್ನಾಟಕ ಪಬ್ಲಿಕ್ ಶಾಲೆ ಕಟ್ಟಡ ಉದ್ಘಾಟಿಸಿ ಮಾತನಾಡಿದರು. ನಾನು ರಾಜಕಾರಣಿಯಾದರೂ ನನಗೆ ಪ್ರಿಯವಾದದ್ದು ಶಿಣ. ನಮಗೆ ಕನಕಪುರದಲ್ಲಿ ಉತ್ತಮ ಶಿಣ ಸಿಗುವುದಿಲ್ಲ ಎಂಬ ಕಾರಣಕ್ಕೆ ನಮ್ಮ ತಂದೆ&ತಾಯಿ ನನ್ನನ್ನು ಬೆಂಗಳೂರಿಗೆ ಸೇರಿಸಿದ್ದರು. ಹಾಗಾಗಿ, ನಮ್ಮ ಹಳ್ಳಿಹಳ್ಳಿಗಳಲ್ಲೂ ಒಳ್ಳೆಯ ಶಿಣ ಸಿಗಬೇಕು. ನಮ್ಮ ಗ್ರಾಮೀಣ ಭಾಗದಲ್ಲಿ ಉದ್ಯೋಗ ಹಾಗೂ ಶಿಣಕ್ಕೆ ಜನ ವಲಸೆ ಹೋಗುತ್ತಿದ್ದಾರೆ. ಅದನ್ನು ತಡೆಯಬೇಕಾದರೆ ಅವರು ಇದ್ದಲ್ಲೆ ಉದ್ಯೋಗ ಹಾಗೂ ಶಿಣ ಕೊಡಬೇಕು. ಈ ನಿಟ್ಟಿನಲ್ಲಿ ನಮ್ಮ ಸರ್ಕಾರ ಶ್ರಮಿಸುತ್ತಿದೆ ಎಂದರು.
ಸಂಸದ ಡಾ.ಸಿ.ಎನ್.ಮಂಜುನಾಥ್ ಮಾತನಾಡಿ, ಶಿಣ ಒಂದು ಬದುಕು ಹಾಗೂ ಜೀವನದ ರಾ ಕವಚ. ಮಕ್ಕಳು ಉತ್ತಮ ಶಿಣ ಪಡೆದು ಸಮಾಜದಲ್ಲಿ ಗೌರವಕ್ಕೆ ಪಾತ್ರರಾಗಬೇಕು. ಸರ್ಕಾರ ಶಾಲೆಗಳಿಗೆ ಸ್ವಚ್ಚತಾ ಹುದ್ದೆ ಸೃಜಿಸಬೇಕು. ಈ ಕೆಲಸ ರಾಜ್ಯಾದ್ಯಂತ ಮಾಡಬೇಕು. ಕೇವಲ ಪದವಿ ಪಡದರೆ ಕೆಲಸ ಸಿಗುವುದಿಲ್ಲ, ಕೌಶಲ ಪಡೆದರೆ ಕೆಲಸ ಸಿಗುತ್ತದೆ. ಶಿಣದ ಜತೆಗೆ ಕೌಶಲ ಕಲಿಸುವ ಕೆಲಸವಾಗಬೇಕು. ಶಿಣ ಇಲಾಖೆ ಈ ಜವಾಬ್ದಾರಿ ಹೊತ್ತು ಗುಣಮಟ್ಟದ ಶಿಣ ದೊರಕುವಂತೆ ಮಾಡಬೇಕು ಎಂದರು.
ಆದಿಚುಂಚನಗಿರಿ ಮಠಾಧೀಶರಾದ ಡಾ.ನಿರ್ಮಲಾನಂದನಾಥ ಸ್ವಾಮೀಜಿ ದಿವ್ಯ ಸಾನಿಧ್ಯವಹಿಸಿ ಅಶೀರ್ವಚನ ನೀಡಿದರು. ಶಾಸಕ ಸಿ.ಪಿ.ಯೋಗೇಶ್ವರ್, ಮೇಲ್ಮನೆಸದಸ್ಯರಾದ ಪುಟ್ಟಣ್ಣ, ಎಸ್.ರವಿ, ಡಾ.ವೆಂಕಟಪ್ಪ, ಬಿಎಂಐಸಿಎಪಿಎ ಅಧ್ಯ ರುನಂದನ್ ರಾಮಣ್ಣ, ಜಿಲ್ಲಾಧಿಕಾರಿ ಯಶವಂತ ವಿ.ಗುರುಕರ್, ಜಿಪಂ ಸಿಇಒ ಅನ್ಮೋಲ್ ಜೈನ್, ಎಸ್ಪಿ ಶ್ರೀನಿವಾಸಗೌಡ, ತಹಸೀಲ್ದಾರ್ ಗಿರೀಶ್, ತಾಲೂಕು ಗ್ಯಾರಂಟಿ ಅನುಷ್ಠಾನ ಸಮಿತಿ ಅಧ್ಯ ಬೋರ್ವೆಲ್ ರಂಗನಾಥ್, ನಗರ ಯೋಜನಾ ಪ್ರಾಧಿಕಾರದ ಅಧ್ಯ ಪ್ರಮೋದ್, ಬಮುಲ್ ನಿರ್ದೇಶಕ ಎಸ್.ಲಿಂಗೇಶ್ ಕುಮಾರ್, ಹೊಂಗನೂರು ಗ್ರಾಪಂ ಅಧ್ಯೆ ರೂಪಾ ಸೇರಿದಂತೆ ಹಲವರು ಉಪಸ್ಥಿತರಿದ್ದರು.
ಬೆಂಗಳೂರು ಜಿಲ್ಲೆಯರೆನ್ನಿರಿ!
ಇಂದಿನ ಮಕ್ಕಳು ಉದ್ಯೋಗಿಯಾಗುವುದಕ್ಕಿಂತ ಉದ್ಯಮಿಗಳಾಗಲು ಚಿಂತನೆ ನಡೆಸಿ. ನಮ್ಮ ಜಿಲ್ಲೆಗೆ
ಬೆಂಗಳೂರು ದಣ ಜಿಲ್ಲೆ ಅಂತ ಹೆಸರು ಬದಲಾವಣೆ ಮಾಡಿದ್ದೇವೆ. ಮೂಲತ ನಾವೆಲ್ಲಾ ಬೆಂಗಳೂರು ಜಿಲ್ಲೆಯವರು. ಇಡೀ ವಿಶ್ವವೇ ಬೆಂಗಳೂರನ್ನು ನೋಡುತ್ತಿದೆ. ನಿಮ್ಮ ಯಾವುದೇ ಸರ್ಟಿಫಿಕೇಟ್ ಇದ್ದರೂ ಅದರಲ್ಲಿ ಬೆಂಗಳೂರು ದಣ ಅಂತ ತಿದ್ದುಪಡಿ ಮಾಡಿಸಿಕೊಳ್ಳಿ ಎಂದು ವಿದ್ಯಾರ್ಥಿಗಳಿಗೆ ಕರೆ ನೀಡಿದರು.
ಅನ್ನ ಹೊಟ್ಟೆ ತುಂಬಿಸುತ್ತದೆ. ಆದರೆ, ಅರ ಮಾರ್ಗದರ್ಶನ ನೀಡುತ್ತದೆ. ಶಿಣ ಇಲಾಖೆಯಲ್ಲಿ 50 ಸಾವಿರ ಶಿಕರ ಕೊರತೆ ಇದೆ. ಅದನ್ನು ಸರಿಪಡಿಸುವ ಕೆಲಸ ಮಾಡುತ್ತಿದ್ದೇವೆ. ಶಾಲೆಗಳಿಗೆ ಡಿ ಗ್ರೂಪ್ ನೌಕರರನ್ನು ಕೊಡುವ ವಿಚಾರವನ್ನು ಸಹ ಚರ್ಚೆ ಮಾಡುತ್ತೇವೆ. ಕರ್ನಾಟಕ ಪಬ್ಲಿಕ್ ಶಾಲೆ ನನ್ನ ಕನಸಿನ ಕಾರ್ಯಕ್ರಮ. ಇದನ್ನು ರಾಜ್ಯಾದ್ಯಂತ ಯಶಸ್ವಿ ಮಾಡುವ ಕೆಲಸ ಮಾಡುತ್ತೇವೆ ಎಂದರು.
ಪ್ರೌಢಶಾಲೆವರೆಗೂ ಒಂದೆಡೆ ಶಿಕ್ಷಣ ಸಿಗಲಿ
ವಿಧಾನ ಪರಿಷತ್ ಸಭಾಪತಿ ಬಸವರಾಜ ಹೊರಟ್ಟಿ ಮಾತನಾಡಿ, ಕೆಪಿಎಸ್ ಶಾಲೆ ಎಂದರೆ ಪೂರ್ವ ಪ್ರಾಥಮಿಕದಿಂದ ಹಿಡಿದು ಪ್ರೌಢಶಾಲೆವರೆಗೂ ಒಂದೇ ಕಾಂಪೌಂಡ್ ಒಳಗೆ ಇರಬೇಕು. ಸರ್ಕಾರ ಸರ್ಕಾರಿ ಶಾಲೆಗಳ ಬಗ್ಗೆ ಗಂಭೀರವಾಗಿ ಚಿಂತಿಸಬೇಕು. ಶಿಕರ ಕೊರತೆಯನ್ನು ನೀಗಿಸುವ ಕೆಲಸವನ್ನು ಸರ್ಕಾರ ಮಾಡಬೇಕು. ಶಿಕರ ಹೊರೆ ಕಡಿಮೆ ಮಾಡಿ ಪಾಠ ಮಾಡಲು ಅವಕಾಶ ಕಲ್ಪಿಸಬೇಕು. ಡಿಸಿಎಂ ಡಿ.ಕೆ. ಶಿವಕುಮಾರ್ ಹಾಗೂ ಶಿಣ ಸಚಿವರು ಈ ಬಗ್ಗೆ ಗಮನಹರಿಸಬೇಕು ಎಂದು ಮನವಿ ಮಾಡಿದರು.
ಡಿಸಿಎಂಗೆ ಧನ್ಯವಾದ ಸಲ್ಲಿಸಿದ ಶಿಣ ಸಚಿವ!
ಶಿಣ ಸಚಿವ ಮಧುಬಂಗಾರಪ್ಪ ಮಾತನಾಡಿ, ಶಿಣ ಇಲಾಖೆಗೆ ನಾನು ಬರಲು ಡಿಸಿಎಂ ಡಿ.ಕೆ.ಶಿವಕುಮಾರ್ ಕಾರಣ. ನನಗೆ ಬೇರೆ ಇಲಾಖೆ ಕೊಡಲು ನಿರ್ಧಾರ ಮಾಡಲಾಗಿತ್ತು. ಆದರೆ, ಬಳಿಕ ಡಿಕೆಶಿ ಅವರು ನನ್ನ ತಂದೆ ಮೇಲಿನ ಗೌರವಕ್ಕೆ ಒಳ್ಳೆಯ ಖಾತೆ ನೀಡಬೇಕು ಅಂತ ಶಿಣ ಇಲಾಖೆ ಕೊಟ್ಟರು. ನನ್ನ ಮೇಲೆ ವಿಶ್ವಾಸ ಇಟ್ಟು ಈ ಇಲಾಖೆ ಕೊಟ್ಟಿದ್ದಕ್ಕೆ ಡಿಸಿಎಂ ಸಾಹೇಬರಿಗೆ ಧನ್ಯವಾದಗಳು ಎಂದರು.
500 ಕೆಪಿಎಸ್ ಶಾಲೆಗಳ ನಿರ್ಮಾಣ
ಶಿಣ ಇಲಾಖೆಯಲ್ಲಿ ಸಾಕಷ್ಟು ಸಮಸ್ಯೆ ಹಾಗೂ ಕೊರತೆ ಇದೆ. ಆದರೆ, ಅದು ನಮ್ಮಿಂದ ಆಗಿದ್ದಲ್ಲ, ಹಿಂದಿನ ಸರ್ಕಾರಗಳ ಬಳುವಳಿ. ನಮ್ಮ ಸರ್ಕಾರ ಬಂದಮೇಲೆ ಶಿಣ ಇಲಾಖೆಯಲ್ಲಿ ಸಾಕಷ್ಟು ಬದಲಾವಣೆ ತಂದಿದ್ದೇವೆ. ಸಿಎಸ್ಆರ್ ಅನುದಾನದಲ್ಲಿ ದೊಡ್ಡದೊಡ್ಡ ಶಾಲೆಗಳನ್ನು ಮಾಡಬೇಕು ಎಂಬುದು ಡಿಸಿಎಂ ಅವರ ಕನಸಾಗಿದೆ. ಈ ಬಜೆಟ್ ನಲ್ಲಿ 500 ಕೆಪಿಎಸ್ ಶಾಲೆಗಳ ನಿರ್ಮಾಣ ಆಗುತ್ತಿದೆ. ಇದಕ್ಕಾಗಿ 2500 ಕೋಟಿ ರೂ.ಅನುದಾನ ಮೀಸಲಿರಿಸಿದ್ದೇವೆ. ನಮ್ಮ ಇಲಾಖೆಯಿಂದ ಕ್ಯಾನ್ಸರ್ ಪೀಡಿತ ಮಕ್ಕಳಿಗೆ ಶಾಲೆ ಪ್ರಾರಂಭ ಮಾಡಲು ಉದ್ದೇಶಿಸಲಾಗಿದೆ. ದೇಶದಲ್ಲೆ ಇಂತಹದ್ದೊಂದು ಪ್ರಯೋಗ ಮೊದಲಾಗಲಿದೆ ಎಂದು ಶಿಕ್ಷಣ ಸಚಿವ ಮಧುಬಂಗಾರಪ್ಪ ಹೇಳಿದರು.