

ಬೆಂಗಳೂರು: ನಾಡೋಜ ಡಾ. ವೂಡೇ ಪಿ. ಕೃಷ್ಣ ಅವರ ಸಮಗ್ರ ಜೀವನ ಚರಿತ್ರೆ "ಶಿಕ್ಷಣ ಶಿಲ್ಪಿ' ಪುಸ್ತಕ ಹಾಗೂ ಮುಖಾಮುಖಿ, ಅಂಬೇಡ್ಕರ್ ಅನುಸಂಧಾನ, ನೂರು ನೆನಪು ಪುಸ್ತಕಗಳು ನಗರದ ಕನ್ನಡ ಸಾಹಿತ್ಯ ಪರಿಷತ್ತು ಸಭಾಂಗಣದಲ್ಲಿ ಭಾನುವಾರ ಲೋಕಾರ್ಪಣೆಗೊಂಡಿತು.
ಹಿರಿಯ ಸಾಹಿತಿ ಅಗ್ರಹಾರ ಕೃಷ್ಣಮೂತಿ ಕೃತಿ ಲೋಕಾರ್ಪಣೆಗೊಳಿಸಿ ಮಾತನಾಡಿ, ವೂಡೇ ಎಂಬ ತಮ್ಮ ಪೂರ್ವಜರ ಗ್ರಾಮದ ಹೆಸರನ್ನು ತಮ್ಮ ಹೆಸರಿನಲ್ಲಿ ಸೇರಿಸಿಕೊಂಡಿರುವುದು ಕೃಷ್ಣ ಅವರ ನತೆ ಹಾಗೂ ಅಸ್ಮಿತೆಯನ್ನು ತೋರಿಸುತ್ತದೆ. ಹಿರಿಯರ ಆದರ್ಶವನ್ನು ಧ್ಯೇಯವಾಕ್ಯವಾಗಿರಿಸಿಕೊಂಡು ಸಮಾಜದಲ್ಲಿ ತೊಡಗಿಸಿಕೊಂಡಿದ್ದಾರೆ ಎಂದು ಹೇಳಿದರು.
ಈ ಸಂದರ್ಭದಲ್ಲಿ ಸಮಾಜ ಸೇವೆಗಾಗಿ ಬೆಂಗಳೂರು ನಗರ ವಿಶ್ವವಿದ್ಯಾಲಯದಿಂದ ಗೌರವ ಡಾಕ್ಟರೇಟ್ ಪಡೆದುಕೊಂಡು ವೂಡೆ ಪಿ. ಕೃಷ್ಣ ಅವರಿಗೆ ಗೌರವ ಸಮರ್ಪಿಸಲಾಯಿತು. ಹಿರಿಯ ಸಾಹಿತಿ ಡಾ. ಮಲ್ಲೇಪುರಂ ಜಿ. ವೆಂಕಟೇಶ, ಜಾನಪದ ವಿದ್ವಾಂಸ ಡಾ. ಮೀರಾಸಾಬೀಹಳ್ಳಿ ಶಿವಣ್ಣ, ಬಿಎಂಶ್ರೀ ಪ್ರತಿಷ್ಠಾನದ ಅಧ್ಯಕ್ಷ ಭೈರಮಂಗಲ ರಾಮೇಗೌಡ, ಅನುವಾದಕ ಪ್ರೊ. ಎಂ. ಜಿ. ರಂಗಸ್ವಾಮಿ ಮತ್ತಿತರರಿದ್ದರು.