ಮೌಢ್ಯತೆಯಿಂದ ಮಹಿಳೆಯರು ದೂರವಿರಿ : ಡಾ.ಜಯದೇವಿ ಗಾಯಕವಾಡ ಕರೆ

1703 KLB 01
Published on

ಕಲಬುರಗಿ: ಮಹಿಳೆಯರು ಉಪವಾಸ ಮಾಡುವುದು ಬಿಡಿ ಪೌಷ್ಟಿಕ ಆಹಾರ ಸೇವಿಸಿ ಸಂಪ್ರದಾಯ, ಮೂಢನಂ ಬಿಕೆ,ಮೌಢ್ಯತೆಯಿಂದ ದೂರವಿರಿ ಎಂದು ಕೇಂದ್ರ ಸಾಹಿತ್ಯ

ಅಕಾಡೆಮಿ ಕನ್ನಡ ಸಲಹಾ ಸಮಿತಿ ಸದಸ್ಯೆ ಡಾ.ಜಯದೇ ವಿ ಗಾಯಕವಾಡ ಕರೆ ನೀಡಿದರು

ನಗರದ ಸಿದ್ಧಾರೂಢ ಕಾಲೋನಿಯಲ್ಲಿ ಸಿರಿ ಸ್ನೇಹ ಬಳಗ ಏರ್ಪಡಿಸಿದ ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆ ಮತ್ತು ಸನ್ಮಾನ ಸಮಾರಂಭದಲ್ಲಿ ಸನ್ಮಾನ ಸ್ವೀಕರಿಸಿ ಮಾತ ನಾಡಿ ಸಾವಿತ್ರಿಬಾಯಿ ಫುಲೆ ಅವರು ಪ್ರಥಮ ಶಿಕ್ಷಕಿಯಾಗಿ ತನ್ನದಲ್ಲದ ಮಗುವನ್ನು ದತ್ತಕ ತಗೆದುಕೊಂಡು ಡಾಕ್ಟರ್ ಮಾಡಿ,ಶಿಕ್ಷಣ ನೀಡಿ ಸಾಮಾಜಿಕ ಸೇವೆಯಂತೆ ಮಹಿಳೆಯ ರು ಮಾಡಬೇಕೆಂದರು.

ಹೆಣ್ಣನ್ನು ಮೊದಲಿನಿಂದಲೂ ಆರಾಧಿಸುತ್ತಾ ಬಂದಿದ್ದೇವೆ.ನಮ್ಮದು ಮಾತೃಪ್ರಧಾನ ಸಂಸ್ಕೃತಿ ಆದರೆ ನಾವು ಹಿಂಜರಿಕೆಯಿಂದು ಅನಾಥ ಪ್ರಜ್ಞೆ ಕಾಡುತ್ತಿದೆ.ಹೆಣ್ಣು ಜ್ಞಾನಿಯಾಗಿದ್ದಾಳೆ.ಹೆಣ್ಣಿನ ಆಯುಷ್ಯ ಗಂಡಿಗಿಂತ ಹೆಚ್ಚಿದೆ ಅವಳು ಅಬಲೆ ಎಂದು ಹೇಳುತ್ತಾ ಶೋಷಣೆಗೆ ಒಳಗಾಗಿದ್ದಾಳೆ ಅದಕ್ಕೆ ಹೆಣ್ಣು ಅಬಲೆ ಅಲ್ಲ ಸಬಲೆ ಎಂದು ಸಿಯುಕೆ ಕನ್ನಡ ವಿಭಾಗದ ಮುಖ್ಯಸ್ಥೆ ಡಾ.ಶಿವಗಂಗಾ ರುಮ್ಮಾ ಪ್ರತಿಪಾದಿಸಿದರು

ಕಿತ್ತೂರು ರಾಣಿ ಚೆನ್ನಮ್ಮ ಪ್ರಶಸ್ತಿ ಪುರಸ್ಕೃತರಾದ ಡಾ.ವಿಶಾಲಕ್ಷಿ ಕರಡ್ಡಿ ಹೆಣ್ಣಿನ ಮಡಿಲಲ್ಲಿ ಗಂಡಿದೆ ಹೆಣ್ಣುಮಕ್ಕಳಲ್ಲಿ ಛಲವಿದೆ ತಾವು ಮನಸ್ಸು ಮಾಡಿ ಮುನ್ನಡೆಯಿರಿ ಎಂದರು.

ನಿವೃತ್ತ ಶಿಕ್ಷಕಿ ಶರಣಮ್ಮ ಮಾತನಾಡಿ ಇದೊಂದು ಜಾಗೃತಿ ಸಮಾವೇಶ ಎಂದರು.ಚೆನ್ನಮ್ಮ ಪ್ರಶಸ್ತಿ ಪುರಸ್ಕೃತೆ ಡಾ.ಸಂಗೀತಾ ಹಿರೇಮಠ ಗುರು ಅಣ್ಣ,ತಂದೆ, ಗಂಡ ನನಗೆ ಸ್ಫೂರ್ತಿ ಪುರುಷರನ್ನು ಇಟ್ಟುಕೊಂಡು ನಡೆದಾಗ ಜನ್ಮ ಸಾರ್ಥಕವೆಂದರು.ಸಾಹಿತ್ಯ ಶ್ರೀ ಪುರಸ್ಕೃತೆ ಡಾ.ಸಾರಿಕಾ ದೇವಿ ಕಾಳಗಿ ಪುರುಷರು ನಮ್ಮ ಹಿಂದೆ ಇದ್ದಾರೆ.ಹೆಣ್ಣು ಮನಸ್ಸು ಮಾಡಿದರೆ ಎಲ್ಲಾ ಸಾಧನೆ ಮಾಡಲು ಸಾಧ್ಯವೆಂ ದರು. ಶೀಲಾದೇವಿ ಎಸ್.ಬಿರಾದಾರ,ಗಂಗಮ್ಮ ಸಜ್ಜನ ಕವನ ವಾಚಿಸಿದರು.

ಅಧ್ಯಕ್ಷತೆಯನ್ನು ಸಾಹಿತ್ಯ ಅಕಾಡಮಿ ಸದಸ್ಯರು, ಸಾಹಿತಿ ಡಾ.ಚಂದ್ರಕಲಾ ಬಿದರಿ ಮಾತನಾಡಿ ನಮ್ಮ ಹೆಣ್ಣು ಮಕ್ಕಳು ಕಾಲೋನಿಯಲ್ಲಿ ಸೇರಿ ಮಹಿಳೆಯರ ಸಮಸ್ಯೆ- ಸವಾಲು ಅರಿತು,ಮನೆ- ಮಕ್ಕಳ ಜೊತೆ ಸಾರ್ವಜನಿಕ ಬದುಕಿಗೆ ಸ್ಪಂದಿಸಲು ಕರೆ ನೀಡಿದರು. ವಿವಿಧ‌‌ ಸ್ಪರ್ಧೆಯಲ್ಲಿ

ಪಾಲ್ಗೊಂಡ ಮಹಿಳೆಯರಿಗೆ ಪ್ರಶಸ್ತಿ- ಬಹುಮಾನ ನೀಡಿ ಸತ್ಕರಿಸಲಾಯಿತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net