ಯೂನಿಟಿ ಬಿಲ್ಡಿಂಗ್​ನಿಂದ ಹಾರಿ ಪ್ರಾಣ ಬಿಟ್ಟ ಮಹಿಳೆ

unity building
Published on

ಬೆಂಗಳೂರು: ನಗರದ ಯೂನಿಟಿ ಬಿಲ್ಡಿಂಗ್​ನಿಂದ ಹಾರಿ ಮಹಿಳೆಯೊಬ್ಬರು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಇಂದು(ಏ.6) ನಡೆದಿದೆ. ಅಪರ್ಣ ದೇವಿ ಮೃತ ದುರ್ದೈವಿ ಎಂದು ತಿಳಿದು ಬಂದಿದೆ.

ಡಿವಿಷನಲ್​ ಮ್ಯಾನೇಜರ್​ ಆಗಿ ಕಾರ್ಯ ನಿರ್ವಹಿಸುತ್ತಿದ್ದ ಅಪರ್ಣ ನಾಲ್ಕನೇ ಮಹಡಿಯಲ್ಲಿರುವ ಕಚೇರಿಯ ಕಿಟಕಿ ತೆಗೆದಿದ್ದಾರೆ. ಇದನ್ನು ಗಮನಿಸಿದ ಕಚೇರಿ ಸಿಬ್ಬಂದಿ ತಡೆಯಲು ಯತ್ನಿಸಿದ್ದಾರೆ. ಆದರೆ, ಅಷ್ಟರಲ್ಲಾಗಲ್ಲೇ ಅಪರ್ಣ ಕೆಳಕ್ಕೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ಸ್ಥಳಕ್ಕೆ ಎಸ್​​.ಜೆ. ಪಾರ್ಕ್​ ಠಾಣೆ ಪೊಲೀಸರು ಭೇಟಿ ನೀಡಿದ್ದು ಮೃತ ಮಹಿಳೆಗೆ ಸಂಬಂಧಿಸಿದ ಮೊಬೈಲ್​ ಹಾಗೂ ಡೈರಿಯನ್ನು ವಶಕ್ಕೆ ಪಡೆದು ತನಿಖೆ ನಡೆಸುತ್ತಿದ್ದಾರೆ. ಮಹಿಳೆ ಆತ್ಮಹತ್ಯೆ ಮಾಡಿಕೊಳ್ಳಲು ಕಾರಣ ಏನೆಂಬ ಪ್ರಶ್ನೆಗೆ ಪೊಲೀಸರ ತನಿಖೆಯಿಂದ ಉತ್ತರ ಸಿಗಬೇಕಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net