

ವಿಜಯವಾಣಿ ಸುದ್ದಿಜಾಲ ಕಲಬುರಗಿ
ಗಂಡನ ಮನೆಯವರ ಕಿರುಕುಳ ತಾಳದೆ ಪತ್ನಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡ ಘಟನೆ ಇಲ್ಲಿನ ಸಂಜೀವ ನಗರದಲ್ಲಿ ನಡೆದಿದೆ.
ಸಂಗೀತಾ ಕುಮಾರ ದುಬ್ಳೆಕರ್ ಆತ್ಮಹತ್ಯೆ ಮಾಡಿಕೊಂಡವರು. ಮೂಲತಃ ಬಸವ ಕಲ್ಯಾಣ ತಾಲೂಕಿನವರು. ಸಂಜೀವನಗರದ ಕುಮಾರಗೆ ಕೊಟ್ಟು ಮದುವೆ ಮಾಡಲಾಗಿತ್ತು.
ತಂಡ, ಅತ್ತೆ, ನಾದಿನಿ ಇತರರು ಸೇರಿಕೊಂಡು ನಿರಂತರವಾಗಿ ದೈಹಿಕ ಕಿರುಕುಳ ನೀಡುತ್ತಿದ್ದರು ಅಲ್ಲದೆ ತವರು ಮನೆಯಿಂದ ಇನ್ನಷ್ಟು ವರದಕ್ಷಿಣೆಯಾಗಿ ೫೦ ಸಾ.ರೂ. ಹಾಗೂ ಚಿನ್ನ ತರುವಂತೆ ಪೀಡಿಸಿ ತೊಂದರೆ ನೀಡುತ್ತಿದ್ದರು ಎಂದು ಮೃತಳ ಸಹೋದರ ರವಿಕುಮಾರ ದೂರಿದ್ದಾರೆ. ಕಿರುಕುಳ ಸಹಿಸಿಕೊಳ್ಳಲಾಗದೆ ಸಂಗೀತಾ ಮನೆಯಲ್ಲಿ ಫ್ಯಾನಿಗೆ ನೇಣು ಹಾಕಿಕೊಂಡಿದ್ದಾರೆ. ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲಿಸಿದರು. ಚೌಕ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.