

ಕಾಸರಗೋಡು: ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆ ಅಂಗವಾಗಿ ಕೆಲಸದ ಸ್ಥಳದಲ್ಲಿ ಮಹಿಳೆಯರ ಮೇಲಾಗುವ ಲೈಂಗಿಕ ಕಿರುಕುಳದಿಂದ ರಕ್ಷಣೆ ಒದಗಿಸುವ (ಪೋಷ್) ಕಾಯ್ದೆಗೆ ಸಂಬಂಧಿಸಿದ ಕಾರ್ಯಕ್ರಮ ಕಾಸರಗೋಡು ಆರ್ಡಿಒ ಕಚೇರಿಯಲ್ಲಿ ಜರುಗಿತು. ಜಿಪಂ ಆರೋಗ್ಯ ಶಿಕ್ಷಣ ಸ್ಥಾಯಿ ಸಮಿತಿ ಅಧ್ಯಕ್ಷೆ ವಕೀಲೆ ಎಸ್.ಎನ್.ಸರಿತಾ ಉದ್ಘಾಟಿಸಿದರು.
ಕಾಸರಗೋಡು ಆರ್ಡಿಒಪಿ ಬಿನುಮೋನ್ ಅಧ್ಯಕ್ಷತೆ ವಹಿಸಿದ್ದರು. ತಾಂತ್ರಿಕ ಸಹಾಯಕ ನಿರ್ವಹಣಾ ನ್ಯಾಯಮಂಡಳಿಯ ಎಂ. ಪ್ರಸೀತಾ ಪೋಷ್ ಅವಲೋಕನ ತರಗತಿ ನಡೆಸಿದರು. ಕಾಸರಗೋಡು ಆರ್ಡಿಒ ಕಚೇರಿ ಆಂತರಿಕ ದೂರು ಸಮಿತಿ ಅಧ್ಯಕ್ಷೆ ಕೆ.ಶೀಲಾ, ಹಾರ್ಬರ್ ಇಂಜಿನಿಯರಿಂಗ್ ಆಫೀಸ್, ಪೋರ್ಟ್ ಕಚೇರಿ, ಆರ್ಡಿಓ ಕಚೇರಿ ಮಹಿಳಾ ನೌಕರರು ಉಪಸ್ಥಿತರಿದ್ದರು. ಎ.ಅಮೀನಾ ಸ್ವಾಗತಿಸಿದರು. ವಿ.ವಿ.ಪ್ರೀತಿ ವಂದಿಸಿದರು.