ವಿದ್ಯುತ್ ತಂತಿ ತಗುಲಿ ಮಹಿಳೆ ಸಾವು

electricity
Published on


ಚಿಂಚೋಳಿ: ಇಂದ್ರಪಾಡ ಹೊಸಳ್ಳಿ ಗ್ರಾಮದಲ್ಲಿ ಗುರುವಾರ ಸಂಜೆ ವಿದ್ಯುತ್ ತಂತಿ ತಗುಲಿ ಮಹಿಳೆಯೊಬ್ಬಳು ಮೃತಪಟ್ಟಿದ್ದಾಳೆ. ಕಲ್ಲಮ್ಮ ಬಸಪ್ಪ ಹೆಳವರ (೩೫) ಮೃತಳು. ಕುರಿ ಮೇಯಿಸಲು ಹಳ್ಳದ ಕಡೆ ಹೋಗಿದ್ದಾಗ ವಿದ್ಯುತ್ ತಂತಿಯೊAದು ಬಿದ್ದಿತ್ತು. ಇದನ್ನು ಗಮನಿಸದೆ ತಂತಿ ತುಳಿದು ಸ್ಥಳದಲ್ಲೇ ಕೊನೆಯುಸಿರೆಳೆದಿದ್ದಾರೆ. ಸುಲೇಪೇಟ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net