ಕಲಬುರಗಿ ಬಸ್ ನಿಲ್ದಾಣ ದಲ್ಲಿ ಬಸ್ ಹತ್ತುವಾಗ ಮಹಿಳೆಯ ಬ್ಯಾ ಗ್ ನಲ್ಲಿದ್ದ ಚಿನ್ನಾಭರಣ ಕಳವು

Crime Logo
Published on


ವಿಜಯವಾಣಿ ಸುದ್ದಿಜಾಲ ಕಲಬುರಗಿ
ನಗರದ ಕೇಂದ್ರ ಬಸ್ ನಿಲ್ದಾಣದಲ್ಲಿ ಮಹಿಳೆಯ ವ್ಯಾನಿಟಿ ಬ್ಯಾಗ್‌ದಲ್ಲಿದ್ದ   ಚಿನ್ನಾಭರಣ ಹಾಗೂ ನಗದು ಹಣ ಕಳವು ಮಾಡಿದ ಘಟನೆ ನಡೆದಿದೆ.
ಜೇವರ್ಗಿಯ ರುಕ್ಸಾನಾಬೇಗಂ ಮಣಿಯಾರ ಎಂಬುವರೇ ನಗ-ನಾಣ್ಯ ಕಳೆದುಕೊಂಡವರು. ಮನೆಗೆಲಸ ಮಾಡಿಕೊಂಡು ಇದ್ದಾರೆ. ೧೮ ಗ್ರಾಂ ಚಿನ್ನಾಭರಣ ಹಾಗೂ ನಗದು ೪ ಸಾ.ರೂ.ಗಳಿದ್ದ ಪರ್ಸ್ನನ್ನು ಕಳ್ಳರು ಲಪಟಾಯಿಸಿಕೊಂಡು ಪರಾರಿಯಾಗಿದ್ದಾರೆ.
ಮುಂಬಯಿನಲ್ಲಿರುವ ತಂದೆ-ತಾಯಿಗಳನ್ನು ಭೇಟಿ ಮಾಡಲು ಸಣ್ಣ ಮಕ್ಕಳೊಂದಿಗೆ  ಅಲ್ಲಿಗೆ ಹೋಗಿದ್ದರು. ಮರಳಿ ರೈಲಿನ ಮೂಲಕ ಕಲಬುರಗಿಗೆ ಬಂದು, ಅಲ್ಲಿಂದ ಊರಿಗೆ ಹೋಗಲು ಕೇಂದ್ರ ಬಸ್ ನಿಲ್ದಾಣಕ್ಕೆ ಬಂದಿದ್ದರು. ಬಸ್ ನಿಲ್ದಾಣದಲ್ಲಿ ಸಣ್ಣ ಮಕ್ಕಳೊಂದಿಗೆ ಬಸ್ ಹತ್ತುವಾಗ ವ್ಯಾನಿಟಿ ಬ್ಯಾಗ್ ಚೈನ್ ತೆರೆದು ಅದರಲ್ಲಿದ್ದ ಪರ್ಸ್ನನ್ನು ಕಳ್ಳರು ಕದ್ದುಕೊಂಡು ಹೋಗಿದ್ದಾರೆ.
ಬಸ್ ಹತ್ತಿ ಕುಳಿತ ನಂತರ ವ್ಯಾನಿಟಿ ಬ್ಯಾಗ್ ನೋಡಿದಾಗ ಚೈನ್ ತೆಗೆದಿದ್ದು ಕಂಡು ನೋಡಿದಾಗ ಅದರಲ್ಲಿನ ನಗ-ನಾಣ್ಯಗಳಿದ್ದ ಚಿಕ್ಕ ಪರ್ಸ್ ನಾಪತ್ತೆಯಾಗಿರುವುದು ಗೊತಾಗಿದೆ.  ಅಶೋಕ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net