ಭಟ್ಕಳದಲ್ಲಿ ಮಹಿಳಾ ಸಾಮ್ರಾಜ್ಯ !

bkl
Published on

ಭಟ್ಕಳ: ತಾಲೂಕಿನ ವಿವಿಧ ಪ್ರಮುಖ ಹುದ್ದೆಗಳನ್ನು ಮಹಿಳೆಯರು ಅಲಂಕರಿಸಿದ್ದಾರೆ. ಈಗ ನೂತನ ಭಟ್ಕಳ ಉಪವಿಭಾಗಾಧಿಕಾರಿಗಳಾಗಿ ಮಮತಾ ದೇವಿ ಜಿ.ಎಸ್. ಕರ್ತವ್ಯಕ್ಕೆ ಹಾಜರಾಗಿದ್ದಾರೆ.

ಕೆ.ಎ.ಎಸ್ ಶ್ರೇಣಿಯ ಅಧಿಕಾರಿಯಾಗಿದ್ದು, ಬೆಂಗಳೂರಿನ ಕೆ.ಐ.ಟಿ.ಎಸ್ (ಐಟಿ) ಉಪಪ್ರಧಾನ ವ್ಯವಸ್ಥಾಪಕರಾಗಿ ಕಾರ್ಯ ನಿರ್ವಹಿಸುತ್ತಿದ್ದರು. ಇಲ್ಲಿನ ಐಎಸ್ ಅಧಿಕಾರಿ ಭರತ ಎಸ್. ಅವರಿಂದ ತೆರವಾದ ಸ್ಥಾನಕ್ಕೆ ಮಮತಾ ದೇವಿ ಅವರನ್ನು ನಿಯೋಜಿಸಿ ಸರ್ಕಾರ ಆದೇಶ ಹೊರಡಿಸಿದ್ದು ಸೋಮವಾರ ಅಧಿಕಾರ ಸ್ವೀಕರಿಸಿದ್ದಾರೆ.

ಪಟ್ಟಣದ ನಗರ ಠಾಣೆಗೂ ನೂತನ ಪಿಎಸ್​ಐ ಆಗಿ ಸುಮಾ ಆಚಾರ್ಯ ಕರ್ತವ್ಯಕ್ಕೆ ಹಾಜರಾಗಿದ್ದಾರೆ. ನಗರ ಠಾಣೆಯ ಕಾನೂನು ಹಾಗೂ ಸುವ್ಯವಸ್ಥೆ-1 ವಿಭಾಗದ ಪೊಲೀಸ್ ಸಬ್ ಇನ್ಸ್​ಪೆಕ್ಟರ್ ಹುದ್ದೆಗೆ ಗುರುವಾರದಂದು ನಗರ ಠಾಣೆಗೆ ನೂತನ ಪಿಎಸ್​ಐ ಆಗಿ ಚಿಕ್ಕಮಗಳೂರು ಮೂಡುಗೆರೆ ಮೂಲದ ಸುಮಾ ಆಚಾರ್ಯ ನೇಮಕಗೊಂಡಿದ್ದಾರೆ. ಈ ಹಿಂದಿನ ಪಿಎಸ್​ಐ ಭರತ ಕುಮಾರ ಅವರು ಭಟ್ಕಳ ಗ್ರಾಮಿಣ ಠಾಣೆಗೆ ವರ್ಗಾವಣೆಗೊಂಡಿದ್ದು, ಈ ಸ್ಥಾನಕ್ಕೆ ನೇಮಕಗೊಂಡಿದ್ದಾರೆ. ಇವರು ಈ ಹಿಂದೆ ಉಡುಪಿ ಹೆಬ್ರಿ ಪೊಲೀಸ್ ಠಾಣೆಯಲ್ಲಿ 9 ತಿಂಗಳು ಪಿಎಸ್​ಐ ಆಗಿ ಕಾರ್ಯನಿರ್ವಹಿಸಿದ್ದು, ಈಗ ಭಟ್ಕಳಕ್ಕೆ ನೂತನವಾಗಿ ನೇಮಕವಾಗಿದ್ದಾರೆ.

ಭಟ್ಕಳದಲ್ಲಿ ಈಗಾಗಲೆ ಆರ್​ಎಫ್​ಒ ಆಗಿ ಸವಿತಾ ದೇವಾಡಿಗ ಕಾರ್ಯ ನಿರ್ವಹಿಸುತ್ತಿದ್ದರೆ, ಭಟ್ಕಳ ತಾಲೂಕು ಆಸ್ಪತ್ರೆಯ ಆಡಳಿತಾಧಿಕಾರಿಯಾಗಿ ಡಾ. ಸವಿತಾ ಕಾಮತ ಕರ್ತವ್ಯ ನಿರ್ವಹಿಸುತ್ತಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net