ವೃದ್ಧಾಶ್ರಮದಲ್ಲಿ ವಾಸವಾಗಿದ್ದ ವೃದ್ದ ಮಹಿಳೆ ಸಾವು

Womens death
Published on


ಕಲಬುರಗಿಯ ಆರ್‌ಜಿ ನಗರ ಠಾಣೆ ವ್ಯಾಪ್ತಿಯಲ್ಲಿರುವ ಮೆಹಬೂಬ್ ಸುಭ್ಹಾನಿ ವೃದ್ಧಾಶ್ರಮದಲ್ಲಿ ವಾಸವಾಗಿದ್ದ  ಕಮಲಾಬಾಯಿ ಗಿರೆಪ್ಪ ಚೌಧರಿ (೭೫) ಭಾನುವಾರ ಮೃತಪಟ್ಟಿದ್ದಾರೆ. ಸರಡಗಿ ಗ್ರಾಮದವರಾಗಿದ್ದರು. ಮನೆಯಲ್ಲಿ ಯಾರು ನೋಡಿಕೊಳ್ಳುವರು ಇಲ್ಲದ ಕಾರಣ ಅವರನ್ನು ವೃದ್ಧಾಶ್ರಮಕ್ಕೆ ಸೇರಿಸಿದ್ದರು. ಅನಾರೋಗ್ಯದಿಂದ ಬಳಲಿ ಜಿಮ್ಸ್ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದಾರೆ. ಆರ್.ಜಿ.ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net