ಗಂಡನ ಮನೆಯವರ ಕಿರುಕುಳ ತಾಳದೆ ವಿಷ ಸೇವಿಸಿ ಆತ್ಮಹತ್ಯೆ

ಕಲಬುರಗಿ : ಗಂಡ ಹಾಗೂ ಮನೆಯವರ ಕಿರುಕುಳ ತಾಳದೆ ಪತ್ನಿ ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡ ಘಟನೆ ತಾಲೂಕಿನ ಸ್ಟೇಷನ್ ಬಬಲಾದ ಗ್ರಾಮದಲ್ಲಿ ನಡೆದಿದೆ.
Crime Logo
Published on


ಕಲಬುರಗಿ : ಗಂಡ ಹಾಗೂ ಮನೆಯವರ ಕಿರುಕುಳ ತಾಳದೆ ಪತ್ನಿ ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡ ಘಟನೆ ತಾಲೂಕಿನ ಸ್ಟೇಷನ್ ಬಬಲಾದ ಗ್ರಾಮದಲ್ಲಿ ನಡೆದಿದೆ.
ಲಾಲಬಿ ಕಾಶಿಮಸಾಬ್ (೩೫) ಕಿರುಕುಳ ತಾಳದೆ ಸಾವಿಗೆ ಶರಣರಾದವರು.
ಸಿಂದಗಿಯ ಲಾಲಬಿಯವರನ್ನು ಸ್ಟೇಷನ್ ಬಬಲಾದಿನ ಕಾಶಿಮಸಾಬ್‌ಗೆ ಕೊಟ್ಟು ಮದುವೆ ಮಾಡಲಾಗಿತ್ತು. ನಾಲ್ಕು ಮಕ್ಕಳಿದ್ಧಾರೆ. ಆರಂಭದಿAದಲೂ ಗಂಡ ಹಾಗೂ ಮನೆಯವರು ಕಿರುಕುಳ ನೀಡುತ್ತಿದ್ದರು. ಇದರಿಂದ ಬೇಸತ್ತು ಕಳೆದ ೧೩ ರಂದು ವಿಷ ಸೇವಿಸಿದ್ದರು. ಕಲಬುರಗಿಯಲ್ಲಿ ಚಿಕಿತ್ಸೆ ಕೊಡಿಸಿ, ಬಳಿಕ ಹೈದರಾಬಾದಗೆ ದಾಖಲಿಸಿದಾಗ ಕೊನೆಯುಸಿರೆಳೆದಿದ್ದಾರೆ.
ಮೃತಳ ಪೋಷಕರು ಗಂಡನ ಮನೆಯವರ ವಿರುದ್ಧ ದೂರು ನೀಡಿದ್ದಾರೆ. ಇನ್‌ಸ್ಪೆಕ್ಟರ್ ಸಂತೋಷ ತಟ್ಟೆಪಳ್ಳಿ ಮತ್ತು ಸಿಬ್ಬಂದಿ ಭೇಟಿ ನೀಡಿದರು. ಸಬ್‌ಅರ್ಬನ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

K KK

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net