ಮತ ಚಲಾಯಿಸಲೆಂದೇ ಲಂಡನ್​ನಿಂದ ಮಂಡ್ಯಕ್ಕೆ ಬಂದ ಯುವತಿ! ಮತದ ಮಹತ್ವ ಸಾರಿದ ಸೋನಿಕಾ

WhatsApp-Image-2024-04-26-at-4.00.23-PM
Published on

ಮಂಡ್ಯ: ಇಂದು ರಾಜ್ಯದ ಹಲವು ಜಿಲ್ಲೆಗಳಲ್ಲಿ ಲೋಕಸಭಾ ಚುನಾವಣೆಯ ಮೊದಲ ಹಂತದ ಮತದಾನ ಭರದಿಂದ ಸಾಗಿದ್ದು, ವಿವಿಧ ಕ್ಷೇತ್ರಗಳಲ್ಲಿ ವೋಟಿಂಗ್ ಬಿರುಸಿನಿಂದ ನಡೆಯುತ್ತಿದೆ. ಬೆಳಗ್ಗಿನಿಂದಲೇ ಮತದಾರರು ತಮ್ಮ ಕ್ಷೇತ್ರದ ಮತಗಟ್ಟೆಯಲ್ಲಿ ಮತ ಚಲಾಯಿಸುವ ಮೂಲಕ ಹಕ್ಕು ಚಲಾಯಿಸಿದರೆ, ಇನ್ನೂ ಕೆಲವರು ಕೆಲಸದ ನೆಪವೊಡ್ಡಿ ಮತ ಹಾಕುವುದರಿಂದ ತಪ್ಪಿಸಿಕೊಂಡಿದ್ದಾರೆ. ಸದ್ಯ ಇಂಥವರಿಗೆ ಮಂಡ್ಯದ ಯುವತಿಯೊಬ್ಬರು ಒಬ್ಬೊಬ್ಬರ ಮತವು ಎಷ್ಟು ಮುಖ್ಯ ಎಂಬುದನ್ನು ಅದ್ಬುತವಾಗಿ ತಿಳಿಸಿಕೊಟ್ಟಿದ್ದಾರೆ.

ಮಂಡ್ಯದ ಸೋನಿಕಾ ಎಂಬ ಯುವತಿ, ಕರುನಾಡಲ್ಲಿ ವ್ಯಾಸಂಗ ಮಾಡಿ, ಉದ್ಯೋಗದ ಸಲುವಾಗಿ ಲಂಡನ್​ಗೆ ತೆರಳಿದ್ದು, ಸದ್ಯ ಅಲ್ಲೇ ಕೆಲಸ ಮಾಡುತ್ತಿದ್ದಾರೆ. ಆದರೆ, ಇಂದು ತಮ್ಮ ಕ್ಷೇತ್ರದಲ್ಲಿ ಮೊದಲ ಹಂತದ ಲೋಕಸಭಾ ಚುನಾವಣೆಯ ಮತದಾನ ನಡೆಯುತ್ತಿದೆ ಎಂಬುದುನ್ನು ತಿಳಿದು, ಲಂಡನ್​ನಿಂದ ಮಂಡ್ಯಗೆ ಬಂದು ಮತ ಚಲಾಯಿಸಿದ್ದಾರೆ.

ಮತದಾನದ ಹಿನ್ನಲೆ ಲಂಡನ್​ನಿಂದ ಮಂಡ್ಯಕ್ಕೆ ಬಂದ ಸೋನಿಕಾ, ಮಂಡ್ಯದ ಕಾಳೇನಹಳ್ಳಿ ಗ್ರಾಮದ ನಿವಾಸಿ. ಸದ್ಯ ಲಂಡನ್​ನಲ್ಲಿ ನೆಲೆಸಿರುವ ಇವರು, ಸಾಫ್ಟ್​ವೇರ್ ಉದ್ಯೋಗಿಯಾಗಿ ಕೆಲಸ ಮಾಡುತ್ತಿದ್ದಾರೆ. ಬರೋಬ್ಬರಿ ಒಂದೂವರೆ ಲಕ್ಷ ಖರ್ಚು ಮಾಡಿಕೊಂಡು ತವರಿಗೆ ಬಂದಿರುವ ಸೋನಿಕಾ, ಮತ ಚಲಾಯಿಸುವ ಮೂಲಕ ಇದು ನಮ್ಮೆಲ್ಲರ ಕರ್ತವ್ಯ ಎಂಬುದನ್ನು ಸಾರಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net