ಲಸಿಕೆ ಪಡೆದು ಮನೆಗೆ ಮರಳುವಷ್ಟರಲ್ಲೇ ಮೃತಪಟ್ಟ ಮಹಿಳೆ!; ಮಾರುಕಟ್ಟೆಯಲ್ಲಿ ಪ್ರಜ್ಞೆ ತಪ್ಪಿ ಬಿದ್ದು ಸಾವು..

Vaccination
ಮಂಗಳಾ
Published on

ಬೆಂಗಳೂರು: ದೇಶಾದ್ಯಂತ ಶತಕೋಟಿ ಲಸಿಕೀಕರಣದ ಸಂಭ್ರಮ ಆಚರಣೆಯಾದ ಬೆನ್ನಿಗೇ ಲಸಿಕೆ ಪಡೆದ ಮಹಿಳೆಯೊಬ್ಬರು ಕೆಲವೇ ಕ್ಷಣಗಳಲ್ಲಿ ಸಾವಿಗೀಡಾಗಿದ್ದಾರೆ. ಬೆಂಗಳೂರಿನ ಕಾಮಾಕ್ಷಿಪಾಳ್ಯದ ನಿವಾಸಿ ಮಂಗಳಾ (36) ಮೃತಪಟ್ಟವರು.

ಇವರು ಇಂದು ಬೆಳಗ್ಗೆ ಹೆಗ್ಗನಹಳ್ಳಿಯ ಸರ್ಕಾರಿ ಆಸ್ಪತ್ರೆಯಲ್ಲಿ ಕರೊನಾ ಲಸಿಕೆ ಪಡೆದು ಮನೆಗೆ ಮರಳುವಷ್ಟರಲ್ಲಿ ಸಾವಿಗೀಡಾಗಿದ್ದಾರೆ. ಲಸಿಕೆ ಹಾಕಿಸಿಕೊಂಡು ಮರಳುತ್ತಿದ್ದ ಮಂಗಳಾ, ಮನೆ ಸಮೀಪದ ಮಾರುಕಟ್ಟೆ ಬಳಿ ಪ್ರಜ್ಞೆ ತಪ್ಪಿ ಬಿದ್ದಿದ್ದಾರೆ. ಕೂಡಲೇ ಸಾರ್ವಜನಿಕರು ಅವರನ್ನು ಆಸ್ಪತ್ರೆಗೆ ಕರೆದೊಯ್ದು ಚಿಕಿತ್ಸೆ ಕೊಡಿಸಿದ್ದಾರೆ.

ಆದರೆ ಚಿಕಿತ್ಸೆ ಫಲಕಾರಿಯಾಗದೆ ಮಂಗಳಾ ಮೃತಪಟ್ಟಿದ್ದಾರೆ. ಮಂಗಳಾ ಸಾವಿಗೆ ನಿಜವಾದ ಕಾರಣ ಏನು ಎಂಬುದು ಇನ್ನೂ ಖಚಿತವಾಗಿ ತಿಳಿದುಬಂದಿಲ್ಲ. ವೈದ್ಯಕೀಯ ಪರೀಕ್ಷೆ ವರದಿ ಬಂದ ಬಳಿಕವಷ್ಟೇ ಸಾವಿಗೆ ಏನು ಕಾರಣ ಅಂತ ನಿಖರವಾಗಿ ತಿಳಿಯಲಿದೆ. ಸದ್ಯ ರಾಜಗೋಪಾಲನಗರ ಪೊಲೀಸ್ ಠಾಣೆಯಲ್ಲಿ ಅಸಹಜ ಸಾವು ಪ್ರಕರಣ ದಾಖಲಿಸಲಾಗಿದೆ ಎಂದು ಉತ್ತರ ವಿಭಾಗ ಡಿಸಿಪಿ ವಿನಾಯಕ್ ಪಾಟೀಲ್ ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net