ಒಂಟಿ ಮಹಿಳೆ ಬೆದರಿಸಿ ಸರ ಕಿತ್ತ ಅಪರಿಚಿತ ಬೈಕ್ ಸವಾರರು

Chain snatching Photo
Published on
 ಚನ್ನಪಟ್ಟಣ
ರಸ್ತೆಯಲ್ಲಿ ನಡೆದುಕೊಂಡು ಹೋಗುತ್ತಿದ್ದ ಮಹಿಳೆಯನ್ನು ಅಡ್ಡಗಟ್ಟಿ ಚಿನ್ನದ ಮಾಂಗಲ್ಯ ಸರ ಕಿತ್ತುಕೊಂಡು ಹೋಗಿರುವ ಘಟನೆ  ತಾಲೂಕಿನ ಮಾರ್ಚನಹಳ್ಳಿಯಲ್ಲಿ  ನಡೆದಿದೆ.
ಮಾರ್ಚನಹಳ್ಳಿ ಗ್ರಾಮದ ಜಯಮ್ಮ ಚಿನ್ನದ ಸರ ಕಳೆದುಕೊಂಡ ಮಹಿಳೆ. ಈಕೆ ತಮ್ಮ ಪಕ್ಕದ ಗ್ರಾಮವಾದ ಎ.ವಿ ಹಳ್ಳಿಗೆ ಹೋಗಿ ವಾಪಸ್ ತಮ್ಮ ಗ್ರಾಮಕ್ಕೆ ಹಿಂದಿರುವಾಗ, ದ್ವಿಚಕ್ರ ವಾಹನದಲ್ಲಿ ಬಂದ ಇಬ್ಬರು ಅಪರಿಚಿತರು ರಸ್ತೆಯಲ್ಲಿ ಈಕೆಯನ್ನು ಅಡ್ಡಹಾಕಿ, ಚಾಕು ತೋರಿಸಿ ಬೆದರಿಸಿ ಚಿನ್ನದ ಸರ ಪಡೆದು ಪರಾರಿಯಾಗಿದ್ದಾರೆ.
ಮೂವತ್ತು ಗ್ರಾಂ ತೂಕದ ಮಾಂಗಲ್ಯ ಸರ, ಒಂದು ಗ್ರಾಂ ಗುಂಡು ಹಾಗೂ ಐದು ಗ್ರಾಂ ಮಾಂಗಲ್ಯ ಕಿತ್ತು ಪರಾರಿಯಾಗಿರುವ ಬಗ್ಗೆ ಜಯಮ್ಮ, ಅಕ್ಕೂರು ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಕಳ್ಳರ ಪತ್ತೆಗೆ ಬಲೆ ಬೀಸಿದ್ದಾರೆ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net