ಮಗನ ಉದ್ಯೋಗಕ್ಕಾಗಿ ಸಂಸದೆಯ ಕಾಲಿಗೆ ಬಿದ್ದ ಮಹಿಳೆ; ಹೈಕೋರ್ಟ್ ತೀರ್ಪಿಗೂ ಬಗ್ಗದ ಆಡಳಿತ ಮಂಡಳಿ?

Sumalatha
Published on

ಮಂಡ್ಯ: ಮಗನಿಗೆ ಅನುಕಂಪದ ಆಧಾರದ ಮೇಲೆ ಉದ್ಯೋಗ ಕೊಡಿಸುವಂತೆ ಸಂಸದೆ ಸುಮಲತಾ ಅಂಬರೀಷ್ ಅವರ ಕಾಲಿಗೆ ಬಿದ್ದು ಮಹಿಳೆಯೊಬ್ಬರು ಮನವಿ ಮಾಡಿಕೊಂಡ ಪ್ರಕರಣ ನಡೆದಿದೆ. ಮಂಡ್ಯದ ಜಿಲ್ಲಾಧಿಕಾರಿ ಕಚೇರಿ ಬಳಿಯೇ ಈ ಬೆಳವಣಿಗೆ ನಡೆದಿದೆ.

ಸಂಸದೆ ಸುಮಲತಾ ಬಳಿ ಮಂಡ್ಯ ಜಿಲ್ಲೆಯ ಮದ್ದೂರಿನ ಎಲ್​. ಸುಮಲತಾ ಎಂಬಾಕೆ ಈ ಮನವಿ ಮಾಡಿಕೊಂಡಿದ್ದಾರೆ. ಅನುಕಂಪದ ಆಧಾರದ ಮೇಲೆ ಕೆಲಸ ಕೊಡಿಸುವಂತೆ ಮನವಿ ಸಲ್ಲಿಸಲು ಬಂದಿದ್ದ 32 ಕುಟುಂಬಸ್ಥರ ಪೈಕಿ ಈಕೆ ಕೂಡ ಒಬ್ಬರಾಗಿದ್ದಾರೆ. ಮನ್ಮುಲ್​ನಲ್ಲಿ ಉದ್ಯೋಗದಲ್ಲಿದ್ದಾಗ ಮೃತಪಟ್ಟಿದ್ದ ಪತಿಯ ಕೆಲಸವನ್ನು ಮಗನಿಗೆ ಅನುಕಂಪದ ಆಧಾರದ ಮೇಲೆ ಕೊಡಿಸುವಂತೆ ಈಕೆ ಮನವಿ ಮಾಡಿಕೊಂಡಿದ್ದಾರೆ.

ಅನುಕಂಪದ ಆಧಾರದ ಮೇಲೆ ಉದ್ಯೋಗ ನೀಡಬೇಕು ಹೈಕೋರ್ಟ್ ತೀರ್ಪು ನೀಡಿದ್ದರೂ ಆಡಳಿತ ಮಂಡಳಿ ಕೆಲಸ ಕೊಡದೆ ಸತಾಯಿಸುತ್ತಿದೆ ಎಂಬುದಾಗಿ ಅವರು ಆರೋಪಿಸಿದ್ದಾರೆ. ಅಲ್ಲದೆ ಮನವಿ ಮಾಡಿಕೊಳ್ಳುವಾಗ ಕಾಲಿಗೆ ಬಿದ್ದು ಕೇಳಿಕೊಂಡರು. ಮನವಿ ಸ್ವೀಕರಿಸಿದ ಸಂಸದೆ, ಸಂಬಂಧಪಟ್ಟವರ ಬಳಿ ಮಾತನಾಡುವುದಾಗಿ ಭರವಸೆ ನೀಡಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net