ಸಿಎಂ ಮನೆ ಮುಂದೆ ಮಹಿಳೆಯ ಏಕಾಂಗಿ ಪ್ರತಿಭಟನೆ! ಕಾರಣ ಏನು ಗೊತ್ತೆ?

womanprotest1
Published on

ಬೆಂಗಳೂರು : ಇಂದು ಸಿಎಂ ಬಸವರಾಜ ಬೊಮ್ಮಾಯಿ ಅವರ ಮನೆ ಮುಂದೆ ಮಹಿಳೆಯೊಬ್ಬರು ವಿಭಿನ್ನ ವಿಚಾರಕ್ಕಾಗಿ ಏಕಾಂಗಿ ಪ್ರತಿಭಟನೆ ನಡೆಸಿದ ಘಟನೆ ನಡೆಯಿತು. ನಗರದ ಮಾಣಿಕ್ ಶಾ ಪೆರೇಡ್ ಮೈದಾನದ ಕಾರ್ಯಕ್ರಮ ನಿರೂಪಕರ ಬದಲಾವಣೆ ಮಾಡಲು ಆಗ್ರಹಿಸಿ ಡಾ.ಗಿರಿಜಾ ಎಂಬುವರು ಧರಣಿ ನಡೆಸಿದರು.

ಪ್ರತಿ ಸರ್ಕಾರಿ ಕಾರ್ಯಕ್ರಮಕ್ಕೆ ಇಬ್ಬರೇ ನಿರೂಪಕರಿಗೆ ಅವಕಾಶ ನೀಡಲಾಗುತ್ತದೆ. ಅಪರ್ಣಾ ಹಾಗೂ ಶಂಕರ್ ಪ್ರಸಾದ್ ಅವರಿಗೆ ಮಾತ್ರ ಅವಕಾಶ ನೀಡಲಾಗುತ್ತದೆ. ಸಾಕಷ್ಟು ಉತ್ತಮವಾದ ನಿರೂಪಕರಿದ್ದಾರೆ. ಆದರೆ ಯಾವ ಕಲಾವಿದರಿಗೂ ಅವಕಾಶ ಸಿಗುತ್ತಿಲ್ಲ. ಬೇರೆ ಕಲಾವಿದರು, ಸಾಹಿತಿಗಳು ಎಲ್ಲಿ ಹೋಗಬೇಕು? ಇಬ್ಬರಿಂದ ನಮಗೆ ಸಾಕಷ್ಟು ಅನ್ಯಾಯವಾಗುತ್ತಿದೆ ಎಂದು ಡಾ.ಗಿರಿಜಾ ಹೇಳಿದರು.

ಫುಟ್​ಪಾತ್​ ಮೇಲೆ ಸಭ್ಯವಾಗಿ ಪ್ಲೆಕಾರ್ಡ್ ಹಿಡಿದು ಕುಳಿತಿದ್ದ ಡಾ.ಗಿರಿಜಾ, ಪೊಲೀಸರು ಮನವೊಲಿಸಿ ಎಬ್ಬಿಸಲು ಹೋದಾಗ, ಕಣ್ಣೀರಿಟ್ಟರು. "ಹೊಸ ಸರ್ಕಾರ ಬಂದಿದೆ, ಹೊಸಬರಿಗೆ ಅವಕಾಶ ನೀಡಿ. ಹತ್ತು ವರ್ಷಗಳಿಂದ ಈ ಸಮಸ್ಯೆ ಬಗೆಹರಿದಿಲ್ಲ. ಅನ್ಯಾಯ ಆಗಿದೆ" ಎಂದು ಅಲವತ್ತುಕೊಂಡರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net