ಸಾರಾಯಿ ಖರ್ಚಿಗಾಗಿ ಒಂಟಿ ಮನೆಯ ಮಹಿಳೆಯನ್ನು ಕೊಂದವನಿಗೆ ಜೀವಾವಧಿ ಶಿಕ್ಷೆ

Raju-Gowda.
Published on

ಸಿದ್ದಾಪುರ: ಸಾರಾಯಿ ಕುಡಿಯುವ ಸಲುವಾಗಿ ಒಂಟಿ ಮನೆಯ ಮಹಿಳೆಯನ್ನು ಕೊಂದು ಬಂಗಾದ ದೋಚಿದ್ದವನಿಗೆ ಜೀವಾವಧಿ ಶಿಕ್ಷೆ ಹಾಗೂ 80 ಸಾವಿರ ರೂ. ದಂಡ ವಿಧಿಸಿ ಶಿರಸಿಯ 1 ನೇ ಅಧಿಕ ಜಿಲ್ಲಾ ಮತ್ತು ಸೆಶನ್ಸ್ ನ್ಯಾಯಾಲಯ ತೀರ್ಪು ನೀಡಿದೆ.
ರಾಜು ತಿಮ್ಮ ಗೌಡ ಶಿಕ್ಷೆಗೊಳಗಾದ ಅಪರಾಧಿ. 2020 ರ ಜುಲೈ 18 ರಂದು ತಾಲೂಕಿನ ಬಿಳಗೋಡಿನ ಗೌರಿ ಈಶ್ವರ ನಾಯ್ಕ ಅವರನ್ನು ಹಾರೆಯಿಂದ ಹೊಡೆದು ಕೊಂದು, ಅವರ ಮನೆಯಲ್ಲಿದ್ದ 9 ಸಾವಿರ ರೂ. ಬೆಲೆಯ ಬಂಗಾರವನ್ನು ಕಳ್ಳತನ ಮಾಡಿಕೊಂಡು ಹೋಗಿದ್ದ.
ಪ್ರಕರಣ ದಾಖಲಿಸಿಕೊಂಡ ಸಿದ್ದಾಪುರ ಇನ್ಸ್ಪೆಕ್ಟರ್ ಪ್ರಕಾಶ್ ಕೊಲೆಗಾರನನ್ನು ಬಂಽಸಿ, ತನಿಖೆ ನಡೆಸಿ, ದೋಷಾರೋಪಣಾ ಪಟ್ಟಿ ಸಲ್ಲಿಸಿದ್ದರು. ಸಿದ್ದಾಪುರ ಠಾಣೆಯ ಹೆಡ್ ಕಾನ್ಸ್ಟೇಬಲ್ ಎ.ಎಚ್.ಸೈಯ್ಯದ್ ಸಾಕ್ಷಿಗಳನ್ನು ಕಲೆಹಾಕುವಲ್ಲಿ ಸಾಕಷ್ಟು ಶ್ರಮ ವಹಿಸಿದ್ದರು. ಆರೋಪ ಸಾಬೀತಾದ ಹಿನ್ನೆಲೆಯಲ್ಲಿ ಅಪರಾಧಿಗೆ ಶಿರಸಿಯ 1 ನೇ ಅಧಿಕ ಜಿಲ್ಲಾ ಮತ್ತು ಸೆಶನ್ಸ್ ನ್ಯಾಯಾಲಯದ ಪೀಠಾಸೀನ ಅಧಿಕಾರಿಗಳಾದ ಕಿರಣ ಕಿಣಿ ಅವರು ಶಿಕ್ಷೆ ಪ್ರಕಟಿಸಿದ್ದಾರೆ. 50 ಸಾವಿರ ರೂ.ಗಳನ್ನು ಮೃತಳ ಅವಲಂಬಿತರಾದ ಮಗ ಹಾಗೂ ಮಗಳಿಗೆ ನೀಡುವಂತೆ ಆದೇಶಿಸಿದ್ದಾರೆ. ಸರ್ಕಾರಿ ಅಭಿಯೋಜಕ ರಾಜೇಶ ಎಂ.ಮಳಗೀಕರ್ ಸರ್ಕಾರದ ಪರವಾಗಿ ವಾದ ಮಂಡಿಸಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net