ಹೊನ್ನಾವರ ಪಪಂ ಮೇಲೆ ಲೋಕಾಯುಕ್ತ ದಾಳಿ

Chief office
Published on

ಹೊನ್ನಾವರ: -ಸ್ವತ್ತು ಮಾಡಲು ಲಂಚ ಬೇಡಿಕೆ ಇಟ್ಟಿದ್ದ ಪ.ಪಂ.ಮುಖ್ಯಾಧಿಕಾರಿ ಪ್ರವೀಣಕುಮಾರ ನಾಯಕ ಮತ್ತು ಪ.ಪಂ.ಸದಸ್ಯ ವಿಜಯ ಕಾಮತ್ ಲಂಚ ಸ್ವೀಕರಿಸುವಾಗ ಲೋಕಾಯುಕ್ತ ಪೊಲೀಸರು ದಾಳಿ ನಡೆಸಿದ್ದಾರೆ.

ಉದ್ಯಮನಗರದ ದಾಮೋದರ ಮಂಜುನಾಥ ನಾಯ್ಕ, ಕಲ್ಯಾಣಿ ಮಂಜುನಾಥ ನಾಯ್ಕ ಇವರು ಇಸ್ವತ್ತು ಮಾಡಿಕೊಡಲು ಎರಡು ಲಕ್ಷ ರೂ. ಆರಂಭದಲ್ಲಿ ಬೇಡಿಕೆ ಇಟ್ಟಿದ್ದರು.

ಬುಧವಾರ ಪಟ್ಟಣ ಪಂಚಾಯತ ಸದಸ್ಯ ವಿಜಯ ಕಾಮತ್ ಮೂಲಕ 60 ಸಾವಿರ ವ್ಯವಹಾರ ಕುದುರಿಸಿ ಲಂಚ ಸ್ವೀಕರಿಸುವಾಗ ಬಲೆ ಬಿದ್ದಿದ್ದಾರೆ.

ಲೋಕಾಯುಕ್ತ ಎಸ್.ಪಿ.ಕುಮಾರ್ ಚಂದ್ರ ನೇತೃತ್ವದಲ್ಲಿ ದಾಳಿ ನಡೆದಿತ್ತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net