ಬಸ್‌ಗೆ ಕಾರು ಡಿಕ್ಕಿಯಾಗಿ ಮಹಿಳೆಗೆ ಗಾಯ

car dikki
ಅಪಘಾತದಿಂದ ಕಾರು ಜಖಂಗೊಂಡಿರುವುದು.
Published on

ಪಡುಬಿದ್ರಿ: ಪಡುಬಿದ್ರಿ ಹೆದ್ದಾರಿಯಲ್ಲಿ ಶುಕ್ರವಾರ ಹಠಾತ್ ಬಸ್ ನಿಲ್ಲಿಸಿದ ಮಾಡಿದ ಪರಿಣಾಮ ಕಾರು ಬಸ್ ಹಿಂಬದಿಗೆ ಡಿಕ್ಕಿಯಾಗಿ ಮಂಗಳೂರು ಮಂಗಳಾದೇವಿ ಪರಿಸರದ ಪುಷ್ಪಲತಾ ಆಚಾರ್ಯ(56) ಗಂಭೀರ ಗಾಯಗೊಂಡಿದ್ದಾರೆ.ಮಂಗಳೂರು ಕಡೆಯಿಂದ ಉಡುಪಿಯತ್ತ ಹೋಗುತ್ತಿದ್ದ ತಡೆರಹಿತ ಬಸ್ ರಾಷ್ಟ್ರೀಯ ಹೆದ್ದಾರಿ 66ರಲ್ಲಿ ಹಠಾತ್ತನೇ ಯಾವುದೇ ಮುನ್ಸೂಚನೆ ಇಲ್ಲದೆ ನಿಲ್ಲಿಸಿದ ಪರಿಣಾಮ ಹಿಂದಿನಿಂದ ಹೆದ್ದಾರಿಯಲ್ಲೇ ಬರುತ್ತಿದ್ದ ಕಾರು ಬಸ್ ಹಿಂಬದಿಗೆ ಡಿಕ್ಕಿಯಾಗಿದೆ. ಕಾರಿನಲ್ಲಿ ಮೂವರು ಇದ್ದು, ಚಾಲಕನ ಪಕ್ಕ ಕುಳಿತಿದ್ದ ಪುಷ್ಪಲತಾ ಗಂಭೀರ ಗಾಯಗೊಂಡಿದ್ದಾರೆ. ಪಡುಬಿದ್ರಿಯಲ್ಲಿನ ಪ್ರಥಮ ಚಿಕಿತ್ಸೆ ಬಳಿಕ ಮಂಗಳೂರಿನ ಖಾಸಗಿ ಆಸ್ಪತ್ರೆಗೆ ಅವರನ್ನು ದಾಖಲಿಸಲಾಗಿದೆ. ಕಾರಿನ ಮುಂಭಾಗ ಸಂಪೂರ್ಣ ಜಖಂಗೊಂಡಿದೆ. ಪಡುಬಿದ್ರಿ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net