ಮಾರಿಗುಡಿ ಬಳಿ ಸ್ಕೂಟರ್ ಇಟ್ಟು ಮಹಿಳೆ ನಾಪತ್ತೆ

varsha
Published on

ಪಡುಬಿದ್ರಿ: ಕಾಪು ಮಾರಿಗುಡಿ ಬಳಿ ಸ್ಕೂಟರ್ ಇಟ್ಟು ತೆರಳಿದ ಎರ್ಮಾಳು ಗ್ರಾಮದ ನಿವಾಸಿ ವರ್ಷಾ(27) ಎಂಬುವರು ನಾಪತ್ತೆಯಾಗಿರುವ ಬಗ್ಗೆ ಅವರ ಸಹೋದರ ಪಡುಬಿದ್ರಿ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.

ವರ್ಷಾ ಅವರ ಪತಿ ಪಾದೂರು ಐಎಸ್‌ಪಿಆರ್‌ಎಲ್‌ನಲ್ಲಿ ಎಲೆಕ್ಟ್ರಿಷಿಯನ್ ಆಗಿದ್ದು ಕೆಲಸಕ್ಕೆ ತೆರಳಿದ್ದರು. ವರ್ಷಾ ಅವರು 5.2 ಅಡಿ ಎತ್ತರ, ಗೋಧಿ ಮೈಬಣ್ಣ, ದಪ್ಪ ಶರೀರ ಹೊಂದಿದ್ದಾರೆ. ಕರಿಮಣಿ ಸರ ಧರಿಸಿದ್ದಾರೆ. ತುಳು, ಕನ್ನಡ ಭಾಷೆಗಳನ್ನು ಮಾತಾಡಬಲ್ಲವರಾಗಿದ್ದಾರೆ. ಮಾಹಿತಿ ಇದ್ದಲ್ಲಿ ಪಡುಬಿದ್ರಿ ಪೊಲೀಸ್ ಠಾಣೆ- 0820 2555452 ಸಂಪರ್ಕಿಸಬಹುದು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net