ಮಲಗಿದಲ್ಲಿಯೇ ಮಹಿಳೆ ಮೃತ

deadbody
Published on

ಪಡುಬಿದ್ರಿ: ಮನೆಯಲ್ಲಿ ಮಲಗಿದಲ್ಲಿಯೇ ಮಹಿಳೆಯೊಬ್ಬರು ಮೃತಪಟ್ಟ ಘಟನೆ ಸೋಮವಾರ ನಡೆದಿದೆ. ಉದ್ಯಾವರದ ಮಾಲತಿ (53) ಎಂಬುವರು ಶನಿವಾರ ರಾತ್ರಿ ಊಟ ಮಾಡಿ ಮಗಳೊಂದಿಗೆ ಕೋಣೆಯಲ್ಲಿ ಮಲಗಿದ್ದರು. ಭಾನುವಾರ ಬೆಳಗ್ಗೆ ಮಗಳು ಎದ್ದು ತಾಯಿಯನ್ನು ಎಬ್ಬಿಸಲು ನೋಡಿದಾಗ ಯಾವುದೇ ರೀತಿ ಪ್ರತಿಕ್ರಿಯಿಸದೇ ಇದ್ದು, ಅವರನ್ನು ತಕ್ಷಣ ಮಣಿಪಾಲ ಆಸ್ಪತ್ರೆಗೆ ಕರೆದೊಯ್ಯಲಾಯಿತು. ಅಲ್ಲಿ ಪರೀಕ್ಷಿಸಿದ ವೈದ್ಯರು ಮೃತಪಟ್ಟಿರುವುದನ್ನು ಖಚಿತ ಪಡಿಸಿದ್ದಾರೆ. ಕಾಪು ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net