

ಉಪ್ಪಿನಂಗಡಿ: ಇಲ್ಲಿನ ಠಾಣಾ ವ್ಯಾಪ್ತಿಯ ಶಿರಾಡಿ ಗ್ರಾಮದ ಸಂಪ್ಯಾಡಿ ಎಂಬಲ್ಲಿ ಓಮನಾ (53) ಎಂಬುವರು ಸಂಶಯಾಸ್ಪದವಾಗಿ ಸಾವನ್ನಪ್ಪಿದ್ದಾರೆ. ಮನೆ ಮಂದಿ ಗುರುಮಂದಿರದಲ್ಲಿನ ಕಾರ್ಯಕ್ರಮಕ್ಕೆ ಹೋಗಿದ್ದ ವೇಳೆ ತನ್ನ ತಾಯಿ ಮನೆಗೆ ಹೋಗಿ ಬರುತ್ತೇನೆಂದು ತಿಳಿಸಿದ್ದ ಓಮನಾ ದಿನ ಕಳೆದರೂ ಮರಳಿ ಬಾರದೇ ಇದ್ದಾಗ ತಾಯಿ ಮನೆಗೆ ಕರೆ ಮಾಡಿ ವಿಚಾರಿಸಿದ್ದು, ಆಗ ಅವರು ಅಲ್ಲಿಗೆ ಬಂದಿಲ್ಲವೆಂದು ತಿಳಿಸಿದರು. ಹುಡುಕಾಟ ನಡೆಸಿದಾಗ ತಮ್ಮ ಹಳೇ ಮನೆಯಲ್ಲಿ ಬಿದ್ದ ಸ್ಥಿತಿಯಲ್ಲಿ ಮೃತದೇಹ ಪತ್ತೆಯಾಗಿದೆ ಎಂದು ಉಪ್ಪಿನಂಗಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.