

ಮಳವಳ್ಳಿ: ತಾಲೂಕಿನಲ್ಲಿ ಹೃದಯಾಘಾತದಿಂದ ಮೃತಪಡುವವರ ಸರಣಿ ಮುಂದುವರಿದಿದ್ದು, ಮಂಗಳವಾರ ತಾಲೂಕಿನ ಬೆಳಕವಾಡಿ ಸಮೀಪದ ವಾಸುವಳ್ಳಿಯಲ್ಲಿ ಮಹಿಳೆಯೊಬ್ಬರು ಹೃದಯಾಘಾತದಿಂದ ಮೃತಪಟ್ಟಿದ್ದಾರೆ.
ಗ್ರಾಮದ ಮಾದಯ್ಯ ಎಂಬುವರ ಪತ್ನಿ ಮರಿನಂಜಮ್ಮ (68) ಮೃತರು. ಮನೆಯಲ್ಲಿದ್ದ ಅಡುಗೆ ಮಾಡುತ್ತಿದ್ದ ಸಂದರ್ಭ ಎದೆ ನೋವು ಕಾಣಿಸಿಕೊಂಡಿದ್ದು, ಕೂಡಲೇ ಕುಟುಂಬದವರು ಆಸ್ಪತ್ರೆಗೆ ಸಾಗಿಸುವಾಗ ಮಾರ್ಗಮಧ್ಯೆ ಸಾವೀಗೀಡಾಗಿದ್ದಾರೆ. ಪತಿ, ಪುತ್ರಿ, ಪುತ್ರ ಇದ್ದಾರೆ.
ಬುಧವಾರ ಸ್ವಗ್ರಾಮದ ಮೃತರ ಜಮೀನಿನಲ್ಲಿ ಅಂತ್ಯಕ್ರಿಯೆ ನಡೆಯಿತು. ಈ ಪ್ರಕರಣವೂ ಸೇರಿದಂತೆ ಐದು ದಿನಗಳಲ್ಲಿ ಐದು ಜನ ಹೃದಯಾಘಾತದಿಂದ ಮೃತಪಟ್ಟಿದ್ದಾರೆ.