ವಿದ್ಯುತ್ ತಗುಲಿ ಮಹಿಳೆ ಸಾವು

short-circuit1 crime
Published on

ಹಾವೇರಿ: ಟ್ಯಾಂಕ್‌ಗೆ ನೀರು ಏರಿಸುವ ಸಲುವಾಗಿ ನೀರಿನ ಯಂತ್ರ ಆರಂಭಿಸಲು ಹೋದ ಮಹಿಳೆಗೆ ಆಕಸ್ಮಿಕವಾಗಿ ವಿದ್ಯುತ್ ತಗುಲಿ ಮೃತಪಟ್ಟ ಘಟನೆ ಇಲ್ಲಿಯ ಶಿವಬಸವ ನಗರದಲ್ಲಿ ಶುಕ್ರವಾರ ಸಂಭವಿಸಿದೆ.


ಶಿರಹಟ್ಟಿ ತಾಲೂಕಿನ ಸಂತೆಶಿಗ್ಲಿ ಗ್ರಾಮದ ಅರ್ಚನಾ ಶಶಿಕುಮಾರ ಅತಡಕರ (32) ಮೃತ ದುರ್ದೈವಿ.


ಇವರು ಶಿವಬಸವ ನಗರದಲ್ಲಿ ಬಾಡಿಗೆ ಮನೆಯಲ್ಲಿ ವಾಸವಾಗಿದ್ದರು. ಮನೆಯ ಮುಂದಿನ ನಲ್ಲಿಯಿಂದ ಟ್ಯಾಂಕ್‌ಗೆ ನೀರು ಏರಿಸುವ ಸಲುವಾಗಿ ಯಂತ್ರ ಆರಂಭಿಸಲು ಹೋದಾಗ ವಿದ್ಯುತ್ ತಗುಲಿ ಮೃತಪಟ್ಟಿದ್ದಾರೆ ಎನ್ನಲಾಗಿದೆ.


ಈ ಕುರಿತು ಶಹರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net