ಗ್ರೈಂಡರ್‌ಗೆ ಶಾಲು ಸಿಲುಕಿ ಮಹಿಳೆ ಮೃತ್ಯು

Published on

ಕಾಸರಗೋಡು: ತೆಂಗಿನಕಾಯಿ ತುರಿಯುತ್ತಿದ್ದ ಸಂದರ್ಭ ಮೈಮೇಲಿನ ಶಾಲು ಗ್ರೈಂಡರ್‌ಗೆ ಸಿಲುಕಿ ಕತ್ತು ಬಿಗಿದು ಗೃಹಿಣಿ ಮೃತಪಟ್ಟ ಘಟನೆ ಉಪ್ಪಳದಲ್ಲಿ ನಡೆದಿದೆ. ಉಪ್ಪಳಗೇಟ್ ಅಪ್ನಾಗಲ್ಲಿ ನಿವಾಸಿ ಇಬ್ರಾಹಿಂ ಎಂಬುವರ ಪತ್ನಿ ಮೈಮುನಾ(47)ಮೃತಪಟ್ಟ ಮಹಿಳೆ. ಆಹಾರ ತಯಾರಿಸಲು ತೆಂಗಿನಕಾಯಿ ತುರಿಯುತ್ತಿದ್ದ ಸಂದರ್ಭ ಶಾಲು ಗ್ರೈಂಡರ್‌ಗೆ ಸಿಲುಕಿಕೊಂಡ ಪರಿಣಾಮ ಕತ್ತು ಬಿಗಿದು ಗಂಭೀರ ಅಸೌಖ್ಯಗೊಂಡಿದ್ದರು. ತಕ್ಷಣ ಮನೆಯವರು ಅವರನ್ನು ಮಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಿದರೂ ಪ್ರಯೋಜನವಾಗಿರಲಿಲ್ಲ. ಮಂಜೇಶ್ವರ ಠಾಣೆ ಪೊಲೀಸರು ಕೇಸು ದಾಖಲಿಸಿಕೊಂಡಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net