ಕೆರೆಗೆ ಬಿದ್ದು ಮಹಿಳೆ ಮೃತ್ಯು

Suicide
Published on

ಕಡಬ: ಕಡಬ ತಾಲೂಕಿನ ಐತ್ತೂರು ಗ್ರಾಮದಲ್ಲಿ ಕೆರೆಗೆ ಬಿದ್ದು ಮಹಿಳೆಯೊಬ್ಬರು ಮೃತಪಟ್ಟಿದ್ದಾರೆ. ಐತ್ತೂರು ನಿವಾಸಿ ಲಿಂಗಪ್ಪ ಗೌಡ ಎಂಬುವರ ಪತ್ನಿ ಜಾನಕಿ(60) ಮೃತಪಟ್ಟವರು. ಅವರು ತೋಟಕ್ಕೆ ಅಡಕೆ ಹೆಕ್ಕಲು ಹೋದವರು ರಾತ್ರಿಯಾದರೂ ಮನೆಗೆ ಬಾರದಿದ್ದ ಕಾರಣ ಪತ್ನಿಯನ್ನು ಹುಡುಕಿಕೊಂಡು ತೋಟದ ಬಳಿಗೆ ಹೋದಾಗ ತೋಟದಲ್ಲಿರುವ ಕೆರೆಯಲ್ಲಿ ಅವರ ಮೃತದೇಹ ಕಂಡುಬಂದಿದೆ. ಕಡಬ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net