ಕುದೂರು: ರಾಷ್ಟ್ರೀಯ ಹೆದ್ದಾರಿ&75ರ ಸೋಲೂರು ಹೋಬಳಿಯ ಅಂಬೇಡ್ಕರ್ ನಗರದ ಬಳಿ ಭಾನುವಾರ ದ್ವಿಚಕ್ರ ವಾಹನದಿಂದ ಕೆಳಗೆ ಬಿದ್ದ ಮಹಿಳೆ ಸ್ಥಳದಲ್ಲೇ ಮೃತಪಟ್ಟರೆ, ವಾಹನ ಸವಾರ ಗಾಯಗೊಂಡಿದ್ದಾನೆ.
ಬೆಂಗಳೂರಿನ ಚೋಳರಪಾಳ್ಯದ ನಿವಾಸಿ ವಿಜಯಲಕ್ಷಿ$್ಮ(56) ಮೃತರು. ವಿಜಯಲಕ್ಷಿ$್ಮ ಮತ್ತು ಪುತ್ರ ವಿನಯ್ ಕುಮಾರ್ ಬೆಂಗಳೂರಿನಿಂದ ಮಾದಿಗೊಂಡನಹಳ್ಳಿಯ ಭಕ್ತಮುನೇಶ್ವರ ದೇವಸ್ಥಾನಕ್ಕೆ ಬರುವಾಗ ಅವಡ ಸಂಭವಿಸಿದೆ. ಮರಣೋತ್ತರ ಪರೀೆಗಾಗಿ ಮೃತದೇಹವನ್ನು ನೆಲಮಂಗಲ ಸರ್ಕಾರಿ ಆಸ್ಪತ್ರೆಗೆ ರವಾನಿಸಲಾಗಿದ್ದು, ಕುದೂರು ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.