

ಗೋಕಾಕ: 'ಆರತಿಗೊಬ್ಬಳು, ಕೀರುತಿಗೊಬ್ಬ' ಎಂದು ಕುಟುಂಬ ನಿಯಂತ್ರಣ ಯೋಜನೆಯ ಘೋಷವಾಕ್ಯವೊಂದಿದೆ. ಅಂದರೆ ಎರಡೇ ಮಕ್ಕಳು ಸಾಕು ಎಂಬ ಹಿನ್ನೆಲೆಯಲ್ಲಿ ಇಂಥದ್ದೊಂದು ಸ್ಲೋಗನ್ ಕೆಲವು ವರ್ಷಗಳ ಹಿಂದೆ ಬಹಳಷ್ಟು ಪ್ರಚಲಿತದಲ್ಲಿತ್ತು. ಈಗ ಅದನ್ನು ನೆನಪಿಸುವ ರೀತಿಯಲ್ಲಿ, ಅರ್ಥಾತ್ 'ಆರತಿಗೊಬ್ಬಳು, ಕೀರುತಿಗಿಬ್ಬರು' ಎಂಬಂಥ ಹೆರಿಗೆಯೊಂದು ಆಗಿದೆ.
ವಿಶೇಷವೆಂದರೆ ಇಲ್ಲಿ ಆರತಿಗೇ 'ಆರತಿಗೊಬ್ಬಳು, ಕೀರುತಿಗಿಬ್ಬರು' ಎಂಬಂತೆ ತ್ರಿವಳಿ ಶಿಶುಗಳು ಜನಿಸಿವೆ. ಗೋಕಾಕ ನಗರದ ನಾಕಾ ನಂ.1 ಹತ್ತಿರವಿರುವ ಶಾಂತಾ ನರ್ಸಿಂಗ್ ಹೋಮ್ ಪ್ರಸೂತಿಗೆ ದಾಖಲಾಗಿದ್ದ ಗರ್ಭಿಣಿ ಆರತಿ ಎಂಬವರು ತ್ರಿವಳಿ ಶಿಶುಗಳಿಗೆ ಜನ್ಮ ನೀಡಿ ಅಚ್ಚರಿ ಮೂಡಿಸಿದ್ದಾರೆ. ಅಧಿಕ ರಕ್ತದೊತ್ತಡದಿಂದ ಬಳಲುತ್ತಿದ್ದ ಆರತಿ ಕಳೆದ 10 ದಿನಗಳ ಹಿಂದೆ ಶಾಂತಾ ನರ್ಸಿಂಗ್ ಹೋಮ್‌ಗೆ ದಾಖಲಾಗಿದ್ದರು. ಹೆರಿಗೆ ನೋವಿನಿಂದ ಬಳಲುತ್ತಿದ್ದ ಅವರು ಸೋಮವಾರ ಮೂವರು ಮಕ್ಕಳಿಗೆ ಜನ್ಮ ನೀಡಿದ್ದಾರೆ.
ಕ್ಷಣಕ್ಷಣದ ಮಾಹಿತಿಗಾಗಿ ವಿಜಯವಾಣಿ ಫೇಸ್ಬುಕ್ ಪೇಜ್ ಲೈಕ್ ಮಾಡಿ