ಅಂತಾರಾಷ್ಟ್ರೀಯ ಮಹಿಳೆಯರ ದಿನದಂದೇ ಕಣ್ಣೀರಿಟ್ಟ ನಗರಸಭೆ ಅಧ್ಯಕ್ಷೆ!

Malashree
Published on

ಕೊಪ್ಪಳ: ಇಂದು ಅಂತಾರಾಷ್ಟ್ರೀಯ ಮಹಿಳೆಯರ ದಿನವಾದ ಕಾರಣ ಬಹುತೇಕ ಎಲ್ಲ ಮಹಿಳೆಯರು ಸಂಭ್ರಮ-ಸಂತೋಷದಲ್ಲಿದ್ದರೆ, ನಗರಸಭೆ ಅಧ್ಯಕ್ಷೆಯೊಬ್ಬರು ಇಂದೇ ನೊಂದು ಕಣ್ಣೀರು ಹಾಕಿದ್ದಾರೆ. ಹೀಗೆ ಅತ್ತಿದ್ದು ಕೊಪ್ಪಳ ಜಿಲ್ಲೆಯ ಗಂಗಾವತಿ ನಗರಸಭೆ ಅಧ್ಯಕ್ಷೆ.

ಗಂಗಾವತಿ ನಗರಸಭೆ ಅಧ್ಯಕ್ಷೆ ಆಗಿರುವ ಮಾಲಶ್ರೀ ಸಿ. ಸಂದೀಪ್​ ಅವರ ಪದಚ್ಯುತಿಗೆ ಸ್ವಪಕ್ಷೀಯರೇ ಆಗ್ರಹಿಸಿದ್ದಾರೆ. ಇವರ ಪದಚ್ಯುತಿಗೆ ಆಗ್ರಹಿಸಿರುವ ಪತ್ರಕ್ಕೆ ಕಾಂಗ್ರೆಸ್ ಸದಸ್ಯರು ಸಹಿ ಹಾಕಿ ಕೊಪ್ಪಳ ಜಿಲ್ಲಾಧಿಕಾರಿಗೆ ತಲುಪಿಸಿರುವುದೇ ಇವರ ಕಣ್ಣೀರಿಗೆ ಕಾರಣ.

ನಗರಸಭೆ ಅಧ್ಯಕ್ಷೆ ಆಗಿರುವ ತಮ್ಮ ವಿರುದ್ಧ ಅಂತಾರಾಷ್ಟ್ರೀಯ ಮಹಿಳಾ ದಿನವೇ ಪದಚ್ಯುತಿ ಪ್ರಯತ್ನ ನಡೆದಿರುವ ಕುರಿತು ತೀವ್ರವಾಗಿ ನೊಂದ ಮಾಲಶ್ರೀ ದುಃಖ ತಡೆದುಕೊಳ್ಳಲಾಗದೆ ಅತ್ತಿದ್ದಾರೆ. ಅಲ್ಲದೆ ಸ್ವಪಕ್ಷೀಯರ ವಿರುದ್ಧ ಹರಿಹಾಯ್ದಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net