ಕೃಷಿಹೊಂಡಕ್ಕೆ ಹಾರಿ ಮಹಿಳೆ ಆತ್ಮಹತ್ಯೆ

Published on

ಚನ್ನಪಟ್ಟಣ: ತಾಲೂಕಿನ ಕೆಲಗೆರೆ ಗ್ರಾಮದ ಮಹಿಳೆ ಸೋಮವಾರ ಕೃಷಿಹೊಂಡಕ್ಕೆ ಬಿದ್ದು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ.

ಗ್ರಾಮದ ಜಯಮ್ಮ (57) ಆತ್ಮಹತ್ಯೆ ಮಾಡಿಕೊಂಡವರು. ಎಂದಿನಂತೆ ಹಸುವನ್ನು ಜಮೀನಿಗೆ ಕಟ್ಟಿಹಾಕಲು ತೆರಳಿದ್ದ ಜಯಮ್ಮ ಸಮಯವಾದರೂ ವಾಪಾಸ್ಸಾಗದ ಕಾರಣ ಹುಡುಕಾಟ ನಡೆಸಿದಾಗ ಗ್ರಾಮದ ತೋಟವೊಂದರ ಕೃಷಿಹೊಂಡದಲ್ಲಿ ಶವವಾಗಿ ಪತ್ತೆಯಾಗಿದ್ದಾರೆ. ಕೌಟುಂಬಿಕ ಕಲಹದಿಂದ ಮನನೊಂದು ಹೊಂಡಕ್ಕೆ ಹಾರಿರಬಹುದು ಎನ್ನಲಾಗಿದ್ದು, ಎಂ.ಕೆ.ದೊಡ್ಡಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net