ಮಗನ ಚಿಂತೆಯಿಂದ ಮಹಿಳೆ ಆತ್ಮಹತ್ಯೆ

Hanging
Published on

ಕಾರ್ಕಳ: ತಾಲೂಕಿನ ನಲ್ಲೂರು ಗ್ರಾಮದ ಮಹಿಳೆಯೊಬ್ಬರು ಜೈಲಿನಲ್ಲಿ ಬಂಧನದಲ್ಲಿರುವ ತಮ್ಮ ಪುತ್ರನನ್ನು ಬುಧವಾರ ಮಾತನಾಡಿಸಿಕೊಂಡು ಮನೆಗೆ ಬಂದಿದ್ದು, ಬಳಿಕ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಪ್ರೇಮಾ(50) ಆತ್ಮಹತ್ಯೆ ಮಾಡಿಕೊಂಡ ಮಹಿಳೆ. ಕಾರ್ಕಳ ನಗರ ಪೊಲೀಸರು ಒಂದೂವರೆ ತಿಂಗಳ ಹಿಂದೆ ನಲ್ಲೂರಿನ ಸುಮಂತ್ ಎಂಬಾತನನ್ನು ದಸ್ತಗಿರಿ ಮಾಡಿದ್ದು, ಆತ ಹಿರಿಯಡ್ಕ ಜೈಲಿನಲ್ಲಿ ನ್ಯಾಯಾಂಗ ಬಂಧನದಲ್ಲಿದ್ದಾನೆ. ಸುಮಂತ್‌ನ ತಾಯಿ ಪ್ರೇಮಾ ಹಿರಿಯಡ್ಕ ಜೈಲಿಗೆ ಹೋಗಿ ಆತನನ್ನು ಮಾತನಾಡಿಸಿಕೊಂಡು ಬಂದಿದ್ದರು. ಅದೇ ಚಿಂತೆಯಿಂದ ಪ್ರೇಮಾ ತಮ್ಮ ಮನೆಯ ಸಮೀಪವಿರುವ ಮರಕ್ಕೆ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಕಾರ್ಕಳ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net